
ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದಿನಿಂದ ಐದು ದಿನಗಳ ಅದ್ಧೂರಿ ದೀಪೋತ್ಸವಕ್ಕೆ ಚಾಲನೆ ಸಿಗಲಿದೆ. ಸರಯೂ ನದಿ ತೀರದಿಂದ ಶ್ರೀರಾಮ ಜನ್ಮಭೂಮಿ ದೇವಾಲಯದವರೆಗೆ ದೀಪಗಳ ಬೆಳಕಿನಲ್ಲಿ ಅಯೋಧ್ಯೆ ಕಂಗೊಳಿಸಲಿದೆ.
ಈ ಬಾರಿಯ ದೀಪೋತ್ಸವದಲ್ಲಿ ಐದು ದೇಶಗಳ ರಾಮಲೀಲಾ ತಂಡಗಳು ಭಾಗವಹಿಸಲಿವೆ. ಈ ತಂಡಗಳು ಶ್ರೀರಾಮನ ಜೀವನಗಾಥೆಯನ್ನು ರಾಮಲೀಲಾ ರೂಪದಲ್ಲಿ ಪ್ರದರ್ಶಿಸಲಿವೆ. ಇದರ ಜೊತೆಗೆ ವಿವಿಧ ರಾಜ್ಯಗಳ ಕಲಾವಿದರು ಜಾನಪದ ಕಲೆ, ನೃತ್ಯ, ಸಂಗೀತ ಹಾಗೂ ಸಾಂಪ್ರದಾಯಿಕ ಉಡುಗೆಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸಲಿದ್ದಾರೆ.
ನ. 7ರಂದು ದೀಪೋತ್ಸವದ ಪ್ರಮುಖ ಕಾರ್ಯಕ್ರಮ ನಡೆಯಲಿದೆ. ರಾಮ್ ಕಿ ಪೈಡಿ ಪ್ರದೇಶದ 56 ಘಾಟ್ಗಳಲ್ಲಿ ಬರೋಬ್ಬರಿ 30 ಲಕ್ಷ ದೀಪಗಳನ್ನು ಬೆಳಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇಂದಿನಿಂದಲೇ ಅಯೋಧ್ಯೆಯಲ್ಲಿ ಲೇಸರ್ ಶೋ, ಪ್ರೊಜೆಕ್ಷನ್ ಮ್ಯಾಪಿಂಗ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಇನ್ನು ಶ್ರೀರಾಮ ಜನ್ಮಭೂಮಿ ದೇವಾಲಯದ ಆವರಣದ ಐದು ವಲಯಗಳಲ್ಲಿ ಸುಮಾರು ಒಂದು ಲಕ್ಷ ದೀಪಗಳನ್ನು ಬೆಳಗಿಸಲು ಸಿದ್ಧತೆ ನಡೆದಿದೆ.










