Sunday, June 21, 2026
ಸುದ್ದಿ

ಮೂಡುಬಿದಿರೆ ಸೌಹಾರ್ದ ಫ್ರೆಂಡ್ಸ್ ವತಿಯಿಂದ ರಕ್ತದಾನ ಶಿಬಿರ – ಕಹಳೆ ನ್ಯೂಸ್

ಮೂಡುಬಿದಿರೆ ಸೌಹಾರ್ದ ಫ್ರೆಂಡ್ಸ್ ಮೂಡುಬಿದಿರೆ ಪೊಲೀಸ್ ಠಾಣೆ ಹಾಗೂ ರೋಟರಿ ಆಳ್ವಾಸ್ ಬ್ಲಡ್ ಬ್ಯಾಂಕ್‌ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರವು ಇಲ್ಲಿನ ಸಮಾಜ ಮಂದಿರದಲ್ಲಿ ನಡೆಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆ ಠಾಣೆಯ ಪೊಲೀಸ್ ನಿರೀಕ್ಷಕರಾದ ನಿರಂಜನ್ ಅವರು ಶಿಬಿರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ರಕ್ತದಾನದ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಹಾರ್ದ ಫ್ರೆಂಡ್ಸ್ ಅಧ್ಯಕ್ಷರಾದ ಅಬುಲ್ ಅಲಾ ಪುತ್ತಿಗೆ ಅವರು ಸೌಹಾರ್ದ ಫ್ರೆಂಡ್ಸ್ ಹಮ್ಮಿಕೊಂಡ ಸಾಮಾಜಿಕ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಪೊಲೀಸ್ ಉಪನಿರೀಕ್ಷಕರಾದ ದಿವಾಕರ ರೈ, ಸಿದ್ದಪ್ಪ ಸಿ. ಎಚ್. ಅಬ್ದುಲ್ ಗಫೂರ್, ರೋಯಲ್ ಹಮೀದ್ ಉಪಸ್ಥಿ ತರಿದ್ದರು. ಕಾರ್ಯಕ್ರಮದ ಆಯೋಜಕರಾದ ಹನೀಫ್ ರಹ್ಮಾ ನಿಯ ಹಾಗೂ ಇರ್ಫಾನ್ ಬೆದ್ರ ಭಾಗವಹಿಸಿದವರನ್ನು ಸ್ವಾಗ ತಿಸಿದರು.

ಸೌಹಾರ್ದ ಫ್ರೆಂಡ್ಸ್ ನ ಅರ್ಷದ್ ಪಡುಮಾರ್ನಾಡ್, ನೌಷಾದ್, ಎಲ್. ಆರ್. ರಿಝಾನ್, ಬ್ಲಡ್ ಬ್ಯಾಂಕ್ ನ ರಾಜೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಮೂಡುಬಿದಿರೆ ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಹಿತ ಹಲವಾರು ಮಂದಿ ರಕ್ತದಾನ ಮಾಡಿದರು.