ಸಿಡ್ನಿಯಲ್ಲಿ ಪ್ರಧಾನಿ ಸ್ವಾಗತಕ್ಕೆ ಕರಾವಳಿಯ ತಂಡದ ನೃತ್ಯ ; ಯಕ್ಷಗಾನದ ಸೊಬಗನ್ನು ಅಳವಡಿಸಿದ ವಿಶೇಷ ನೃತ್ಯದ ಮೂಲಕ ನರೇಂದ್ರ ಮೋದಿಯವರಿಗೆ ಸ್ವಾಗತ – ಕಹಳೆ ನ್ಯೂಸ್

ಮಂಗಳೂರು ಮೂಲದ ವಿದುಷಿ ಪಲ್ಲವಿ ಭಾಗವತ್ ಅವರು ತಮ್ಮ ನೃತ್ಯ ಸಂಸ್ಥೆ “ನಾಟ್ಯೋಕ್ತಿ ಶಿಷ್ಯ ವೃಂದದೊಂದಿಗೆ “ಕಾಂತಾರ’ ಸಿನೆಮಾದ ಹಾಡುಗಳ ಮೂಲಕ ಮನರಂಜಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ಹಳ್ಳಿಯ ಸೊಬಗನ್ನು ತೋರಿಸುವ ಜಾನಪದ ನೃತ್ಯ ಹಾಗೂ ಯಕ್ಷಗಾನದ ಸೊಬಗನ್ನು ಅಳವಡಿಸಿದ ಈ ನೃತ್ಯದಲ್ಲಿ ಮಂಗಳೂರು, ಉಡುಪಿ ಸಹಿತ ದೇಶ-ವಿದೇಶದ ಶಿಷ್ಯ ವೃಂದ ಪಾಲ್ಗೊಳ್ಳಲಿದೆ.
ಶ್ರೀ ನಾಟ್ಯನಿಲಯಂ ಮಂಜೇಶ್ವರ ಹಾಗೂ ಕರ್ನಾಟಕ ಕಲಾಶ್ರೀ ವಿದುಷಿ ಕಮಲಾ ಭಟ್ ಬಳಿ ತಮ್ಮ ಭರತನಾಟ್ಯ ವಿದ್ವತ್ ಪೂರೈಸಿರುವ ಪಲ್ಲವಿ ಅವರು ಐಟಿಯಲ್ಲಿ ಕಾರ್ಯ ನಿರ್ವಹಿಸುತ್ತಾ ತಮ್ಮ ಭಾರತನಾಟ್ಯ ಸಂಸ್ಥೆಯನ್ನು ಹಲವು ವರ್ಷಗಳಿಂದ ಸಿಡ್ನಿಯಲ್ಲಿ ನಡೆಸುತ್ತಿದ್ದಾರೆ. ದ.ಕ., ಉಡುಪಿಯ ಆಶ್ವಿಕಾ ರಾವ್, ವಾದಿರಾಜ್ ರಾವ್, ಗೌತಮ್, ಅನಿಶಾ ಪೂಜಾರಿ ಸಹಿತ ಕಲಾವಿದರು ನೃತ್ಯದಲ್ಲಿ ಭಾಗವಹಿಸಲಿದ್ದಾರೆ.











