
ನದಿಯಲ್ಲಿ ಇಂತಹ ಅನೇಕ ಕೌತುಕಗಳಿವೆಯಾದರೂ ಇತ್ತೀಚಿನ ವರ್ಷಗಳಲ್ಲಿ ಆಣೆಕಟ್ಟುಗಳ ನಿರ್ಮಾಣದಿಂದಾಗಿ ಅವುಗಳು ನೀರಿನೊಳಗಿರುತ್ತಿದ್ದವು. ಈ ಬಾರಿ ನದಿ ನೀರು ಸಂಪೂರ್ಣ ಬತ್ತಿರುವ ಕಾರಣ ನದಿಯಲ್ಲಿರುವ ವಿಶೇಷಗಳು ಕಾಣಿಸಲಾರಂಭಿಸಿವೆ. ಶಿವಲಿಂಗ, ಹೂವು, ಜಡೆ, ಬಟ್ಟಲು, ನಂದಿ, ಪಾದಗಳು ಹೀಗೆ ಹತ್ತಾರು ರಚನೆಗಳು ಇಲ್ಲಿನ ಕಲ್ಲಿನಲ್ಲಿ ಕೆತ್ತಲ್ಪಟ್ಟಿವೆ.
ಸ್ಥಳೀಯರು ಪಾದಗಳ ರಚನೆಯು ಸೀತಾ ದೇವಿಯದ್ದೇ ಪಾದ ಎಂದೇ ಪೂಜನೀಯ ಭಾವ ಹೊಂದಿದ್ದಾರೆ. ಕೆಲವೊಂದು ಧಾರ್ಮಿಕ ನಂಬಿಕೆಯ ಗುಂಡಿಗಳು, ಕಯಗಳು ಕೂಡ ಈ ಬಾರಿ ಕಾಣಸಿಕ್ಕಿವೆ. ಕಲ್ಲುಬಂಡೆ ವಿವಿಧ ವಿನ್ಯಾಸಗಳು ಕೂಡ ಆಕರ್ಷಣೀಯವಾಗಿ ಕಂಡುಬರುತ್ತಿವೆ.











