Recent Posts

Saturday, April 25, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವ ಮೋರ್ಚಾ ವತಿಯಿಂದ, ಜಿಲ್ಲೆಯ ಎಲ್ಲಾ ಮಂಡಲಗಳಿ0ದ ಬಿ.ಸಿ ರೋಡ್ ವರೆಗೆ ನಡೆದ “ವಿಕಾಸ್ ತೀರ್ಥ ಬೈಕ್ ರ‍್ಯಾಲಿ” ಸಮಾರೋಪ ಹಾಗೂ ಜಿಲ್ಲಾ ಮಟ್ಟದ ಸಾಧಕರ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಯವರ ೮ ವರ್ಷಗಳ ಅಭೂತಪೂರ್ವವಾದ ಆಡಳಿತದ ಸಲುವಾಗಿ ಯುವ ಮೋರ್ಚಾ ವತಿಯಿಂದ, ಜಿಲ್ಲೆಯ ಎಲ್ಲಾ ಮಂಡಲಗಳಿ0ದ ಬಿ.ಸಿ ರೋಡ್ ವರೆಗೆ “ವಿಕಾಸ್ ತೀರ್ಥ ಬೈಕ್ ರ‍್ಯಾಲಿ” ಸಮಾರೋಪ ಹಾಗೂ ಜಿಲ್ಲಾ ಮಟ್ಟದ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

     

ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ, ಕೋಳಿಸಾಕಣೆ, ಹೈನುಗಾರಿಕೆ, ಮೀನುಸಾಕಾಣೆ, ಪ್ರಾಣಿ ಪಕ್ಷಿಗಳ ಸಾಕಾಣೆ, ಹಣ್ಣು ಹಂಪಲು ಗೀಡಗಳ ಪೋಷಣೆ, ಕೃಷಿ, ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಯುತ ದೇವಿಪ್ರಸಾದ್ ಗೌಡ ಕಡಮ್ಮಾಜೆ ಇವರಿಗೆ ಜಿಲ್ಲಾ ಸಾಧಕ ಸನ್ಮಾನ ಕಾರ್ಯಕ್ರಮ ನೆರವೇರಿತು.

 

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರಾದ ಶ್ರೀಯುತ ನಳೀನ್ ಕುಮಾರ್ ಕಟೀಲ್, ಯುವಮೋರ್ಚಾ ರಾಜ್ಯಾಧ್ಯಕ್ಷರಾದ ಡಾ. ಸಂದೀಪ್ ಕುಮಾರ್, ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ , ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಗುರುದತ್ ಕಾಮತ್, ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷರಾದ ಯಶವಂತ ಗೌಡ ಬೆಳಾಲು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.