Monday, April 27, 2026
ದಕ್ಷಿಣ ಕನ್ನಡಸುದ್ದಿ

ಮಧುಸೂಧನ್ ಪೈಯವರಿಗೆ ಶಾಸಕ ಡಾ.ವೈ ಭರತ್ ಶೆಟ್ಟಿಯವರಿಂದ ಸನ್ಮಾನ- ಕಹಳೆ ನ್ಯೂಸ್

ಮಂಗಳೂರು : ಗುರುಪುರ ಪದವಿ ಪೂರ್ವ ಕಾಲೇಜ್‌ನ ಕಂಪ್ಯೂಟರ್ ಲ್ಯಾಬ್‌ಗೆ 12 ಕಂಪ್ಯೂಟರ್ ಮತ್ತು ಇನ್ವರ್ಟರ್‌ರನ್ನು ಸೆಂಚುರಿ ರಿಯಲ್ ಎಸ್ಟೇಟ್ ಬೆಂಗಳೂರಿನ ಸಿ.ಎಫ್.ಓ. ಚಾರ್ಟರ್ಡ್ ಅಕೌಂಟೆ0ಟ್ ಮಧುಸೂಧನ್ ಪೈ ಕೊಡುಗೆಯಾಗಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಕಾಲೇಜಿನ ಗೌರವಾಧ್ಯಕ್ಷರಾದ, ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ. ವೈಯವರು ಮಧುಸೂಧನ್ ಪೈಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್ , ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ರೂಪಾ, ಪ್ರೈಮರಿ ಮುಖ್ಯೋಪಾಧ್ಯಾಯಿನಿ ಜಯಶ್ರೀ , ಶಾಲಾ ಶಿಕ್ಷಕ ವೃಂದ , ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಊರಿನ ಪ್ರಮುಖರು ಹಾಗೂ ಶಾಲಾ ಹಿತೈಷಿಗಳು ಉಪಸ್ಥಿತರಿದ್ದರು.