Recent Posts

Saturday, April 25, 2026
ದಕ್ಷಿಣ ಕನ್ನಡರಾಜ್ಯಸುದ್ದಿ

ಸೇನಾ ಹೆಲಿಕಾಪ್ಟರ್‌‌‌‌‌‌ ದುರಂತದಲ್ಲಿ ಮಡಿದವರಲ್ಲಿ ಓರ್ವರು ಕಾರ್ಕಳದ ಅಳಿಯ – ಕಹಳೆ ನ್ಯೂಸ್

ಕಾರ್ಕಳ, ಡಿ.09: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರಿನಲ್ಲಿ ಪತನಗೊಂಡ ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದ ಸೇನಾಧಿಕಾರಿಗಳಲ್ಲಿ ಪೈಕಿ ಲೆ.ಕ ಹರ್ಜಿಂದರ್‌‌‌‌‌ ಸಿಂಗ್‌‌‌ ಕಾರ್ಕಳದ ಅಳಿಯ ಕೂಡಾ ಒಬ್ಬರು.


ಇವರು ಕಾರ್ಕಳ ಪುರಸಭೆ ಮಾಜಿ ಉಪಾಧ್ಯಕ್ಷ ದಿ.ಫಿಲಿಪ್ಸ್‌‌ ಮಿನೇಜಸ್‌‌ ಹಾಗೂ ಮೇರಿ ಮಿನೇಜಸ್‌‌‌ ಅವರ ಪುತ್ರಿ ಕ್ಯಾ.ಪ್ರಫುಲ್ಲಾ ಮಿನೇಜಸ್‌‌‌‌‌ ಅವರ ಪತಿ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಫುಲ್ಲಾ ಮಿನೇಜಸ್‌‌‌‌ ಪ್ರೀತಿಸಿ ಲೆ.ಕ ಹರ್ಜಿಂದರ್‌‌‌ ಸಿಂಗ್‌ ಅವರನ್ನು ವಿವಾಹವಾಗಿದ್ದರು. ವಿವಾಹದ ನಂತರ ಲೆ.ಕ ಸಿಂಗ್‌ ಅವರು ಕಾರ್ಕಳದ ಮಾವನ ಮನೆಗೂ ಬಂದಿದ್ದರು ಎಂದು ಪ್ರಫುಲ್ಲಾ ಮಿನೇಜಸ್‌‌‌‌ ಅವರ ಬಂಧುಗಳು ಹೇಳಿದ್ಧಾರೆ.

ಪ್ರಫುಲ್ಲಾ ಅವರು ಭೂಸೇನೆಯ ಅಧಿಕಾರಿ ಆಗಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರಿನಲ್ಲಿ ಪತನಗೊಂಡ ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ಜನರಲ್‌‌ ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು.

ದೇಶದ ಮೂರು ಸೇನಾಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌‌, ಅವರ ಪತ್ನಿ ಹಾಗೂ ಇತರ 12 ಮಂದಿ ಸೇನಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಎಂಐ-17 ಸೇನಾ ಹೆಲಿಕಾಪ್ಟರ್​ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರಿನಲ್ಲಿ ಪತನಗೊಂಡಿತ್ತು.