Recent Posts

Saturday, May 9, 2026
ಹೆಚ್ಚಿನ ಸುದ್ದಿ

ಶಿವರಾತ್ರಿ ಪ್ರಯುಕ್ತ ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಪ್ರಸಾದ ತಿಂದು 120ಕ್ಕೂ ಹೆಚ್ಚು ಮಂದಿ ಅಸ್ವಸ್ಥ-ಕಹಳೆ ನ್ಯೂಸ್

ಡುಂಗರಪುರ : ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಿನ್ನೆಲೆ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸೇವಿಸಿದ ಬಳಿಕ 120ಕ್ಕೂ ಅಧಿಕ ಮಂದಿ ಅಸ್ವಸ್ಥಗೊಳಗಾದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸಾದ ಸೇವಿಸಿದ ಬಳಿಕ ಭಕ್ತಾದಿಗಳಿಗೆ ಹೊಟ್ಟೆನೋವು, ಭೇದಿ ಮತ್ತು ವಾಂತಿ ಶುರುವಾಗಿದ್ದು, ತಕ್ಷಣವೇ ಗ್ರಾಮಸ್ಥರು ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕೇಂದ್ರ, ಪೂನ್‍ಪುರ ಹಾಗೂ ಬಂಕೋಡ ಆರೋಗ್ಯ ಕೇಂದ್ರಗಳ ವೈದ್ಯಕೀಯ ತಂಡಗಳು ಜನರಿಗೆ ಚಿಕಿತ್ಸೆ ನೀಡಿದೆ. ಕೆಲವು ಭಕ್ತಾಧಿಗಳಿಗೆ ಆರೊಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಂಬುಲೆನ್ಸ್ ಮೂಲಕ ಡುಂಗಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾಶಿವರಾತ್ರಿಯ ಪ್ರಯುಕ್ತ ಸಾಗೋ ಖಿಚ್ಡಿ ಹಾಗೂ ಮಜ್ಜಿಗೆಯ ಪ್ರಸಾದವನ್ನು ವಿತರಿಸಲಾಗಿತ್ತು ಎಂದು ತಿಳಿದುಬಂದಿದೆ. ಖಿಚ್ಡಿ ಹಾಗೂ ಮಜ್ಜಿಗೆಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು, ತನಿಖೆಗೆ ಕಳುಹಿಸಲಾಗಿದೆ. ಇದರ ವರದಿ ಬಂದ ಬಳಿಕ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ ಎಂದು ಡಾ.ಯೋಗೇಶ್ ಹೇಳಿದ್ದಾರೆ.