Tuesday, May 5, 2026
ಉಡುಪಿ

ಸುಬ್ರಹ್ಮಣ್ಯ ವಡ್ಡಾರು ಅವರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ದಾಳಿ- ಕಹಳೆ ನ್ಯೂಸ್

ಉಡುಪಿ : ಉಡುಪಿಯ ಪುತ್ತೂರು ಬಳಿ ಈ ಹಿಂದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ವಡ್ಡಾರು ಅವರ ಮನೆಗೆ ಇಂದು ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸುಬ್ರಹ್ಮಣ್ಯ ವಡ್ಡಾರು ಅವರು ವರ್ಗಾವಣೆಗೊಂಡು ಮ್ಯೆಸೂರಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕರಾಗಿದ್ದಾರೆ. ಒಟ್ಟು ನಾಲ್ಕು ಕಡೆ ಈ ದಾಳಿ ನಡೆಸಿದ ಅಧಿಕಾರಿಗಳು ಸುಬ್ರಹ್ಮಣ್ಯ ವಡ್ಡಾರು ಅವರ ಮ್ಯೆಸೂರಿನಲ್ಲಿರುವ ಮನೆ, ಕಚೇರಿ, ಹಾಗೂ ಕಾರವಾರದಲ್ಲಿರುವ ಮನೆ, ಸಹಿತ ಅವರ ನಿವೇಶನಗಳಿಗೆ ದಾಳಿ ನಡೆದಿದೆ ಎನ್ನಲಾಗಿದೆ. ಕಾರವಾರ ನಗರದ ಕೋಡಿಬಾಗ ರಸ್ತೆಯಲ್ಲಿರುವ ಚಲನಚಿತ್ರ ಮಂದಿರದ ಹಿಂಭಾಗ ಇರುವ ಅವರ ನಿವಾಸದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಎ.ಸಿ.ಬಿ ಡಿವೈಎಸ್ಪಿ ಮಂಜುನಾಥ್ ಕೌರಿ ನೇತೃತ್ವದ ತಂಡದಿಂದ ತನಿಖೆ ಮುಂದುವರಿದಿದೆ.