Recent Posts

Sunday, April 26, 2026
ಸುದ್ದಿ

ಕಾಟಿಪಳ್ಳದಲ್ಲಿ ದಿ.ದೀಪಕ್ ರಾವ್ ಹತ್ಯೆಯ ಪ್ರಧಾನ ಆರೋಪಿ ಪಿಂಕ್ ನವಾಜ್ ಮೇಲೆ ತಲವಾರು ದಾಳಿ-ಕಹಳೆ ನ್ಯೂಸ್

ಮಂಗಳೂರು : ಕಾಟಿಪಳ್ಳದಲ್ಲಿ ಕಾಟಿಪಳ್ಳ ದಿ.ದೀಪಕ್ ರಾವ್ ಹತ್ಯೆಯ ಪ್ರಧಾನ ಆರೋಪಿ ಪಿಂಕ್ ನವಾಜ್ ಮೇಲೆ ತಲವಾರು ದಾಳಿ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಜ್ ಹತ್ಯೆ ಯತ್ನ ಆಗಿದ್ದು, ಈ ಘಟನೆ ಕಾಟಿಪಳ್ಳ ಸೆಕೆಂಡ್ ಕ್ರಾಸ್ ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ತಲವಾರು ದಾಳಿ ನಡೆಸಲಾಗಿದ್ದು, ಈ ಘಟನೆ ಕಾಟಿಪಳ್ಳ ನಿವಾಸಿಯಾಗಿರುವ ಪಿಂಕಿ ನವಾಜ್ ರೌಡಿ ಶೀಟರ್ ಆಗಿದ್ದು, ರಸ್ತೆ ಬದಿ ನಿಂತಿದ್ದಾಗಲೇ ವಿರೋಧಿ ಗ್ಯಾಂಗ್ ತಲವಾರು ಬೀಸಿದೆ ಎನ್ನಲಾಗಿದೆ. ಆದರೆ, ನವಾಜ್ ಓಡಿ ತಪ್ಪಿಸಿಕೊಂಡಿದ್ದು, ಬೆನ್ನು ಹಾಗೂ ಕೈಗೆ ತೀವ್ರ ಗಾಯಗಳಾಗಿವೆ. ಆತನನ್ನು ನಗರದ ಎಜೆ ಆಸ್ವತ್ರೆಗೆ ದಾಖಲು ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಹಾಡುಹಗಲೇ ಕಾಟಿಪಳ್ಳ ಪೇಟೆಯ ಬಳಿ ದೀಪಕ್ ರಾವ್ ಕೊಲೆ ನಡೆದಿದ್ದು, ಅದರಲ್ಲಿ ಪಿಂಕಿ ನವಾಜ್ ಸೇರಿ ನಾಲ್ವರು ಆರೋಪಿಗಳಿದ್ದರು. ಕೊಲೆಯ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಇವರನ್ನು ವಿಷಯ ತಿಳಿದು ಪೊಲೀಸರು ಫಾಲೋ ಮಾಡಿದ್ದರು. ಆದರೆ ಕಿನ್ನಿಗೋಳಿಯಿಂದ ಮೂಡುಬಿದ್ರೆ ಕಡೆಗೆ ಪರಾರಿಯಾಗುತ್ತಿದ್ದ ವೇಳೆಯಲ್ಲಿ ಪೊಲೀಸರು ಅಡ್ಡಗಟ್ಟಿದ್ದು, ಆರೋಪಿಗಳು ತಲವಾರು ಬೀಸಿದ್ದರಿಂದ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಇವರಲ್ಲಿ ಪಿಂಕಿ ನವಾಜ್ ಮೇಲೂ ಕಾಲಿಗೆ ಗುಂಡು ಬಿದ್ದಿತ್ತು. ನಿನ್ನೆ ಸಂಜೆ ನವಾಜ್ ನನ್ನು ಗುರಿಯಾಗಿರಿಸಿ ದಾಳಿ ನಡೆಸಿದ್ದಾರೆ . ಇದು ದೀಪಕ್ ಕೊಲೆಯ ಪ್ರತೀಕಾರಕ್ಕಾಗಿ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ ತನ್ನದೇ ಸಮುದಾಯದ ಇನ್ನೊಂದು ಗುಂಪು ಈ ಕೃತ್ಯ ಎಸಗಿದೆ ಎಂದು ಸುರತ್ಕಲ್ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.