Monday, June 22, 2026
ಸುದ್ದಿ

ಪುತ್ತೂರಿನ ವಿವೇಕಾನಂದ ಸಂಸ್ಥೆಯಿಂದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಚಿತ ಆನ್ ಲೈನ್ ತರಬೇತಿ – ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಪ್ರಥಮ ಪಿಯು ಉತ್ತೀರ್ಣರಾಗಿ ದ್ವಿತೀಯ ಪಿಯು ಪ್ರವೇಶ ಪಡೆಯಲಿರುವ ವಿಜ್ಞಾನ ,ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ಕೋಚಿಂಗ್ ಆರಂಭಗೊಂಡಿದೆ.

ಜಾಹೀರಾತು

ಬೆಳಿಗ್ಗೆ ಒಂಬತ್ತೂವರೆಯಿಂದ ಹನ್ನೊಂದು ಘಂಟೆಯವರೆಗೆ ವಾಣಿಜ್ಯ ವಿದ್ಯಾರ್ಥಿಗಳಿಗೆ ಹಾಗೂ ಬೆಳಿಗ್ಗೆ ಹನ್ನೊಂದರಿಂದ ಒಂದು ಘಂಟೆಯವರೆಗೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಪರಾಹ್ನ 3ರಿಂದ -4:30ರವರೆಗೆ ವಾಣಿಜ್ಯ ವಿದ್ಯಾರ್ಥಿಗಳಿಗೆ
ಸಂಜೆ 7ರಿಂದ -9ರವರೆಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ಬೆಳಗಿನ ತರಗತಿಗಳ ಮರುಪ್ರಸಾರವೂ ನಡೆಯಲಿದೆ.

ಕಾರಣಾಂತರಗಳಿಂದ ತರಗತಿಗಳು ವಿಳಂಬವಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಈ ಉಚಿತ ತರಗತಿಗಳ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ
9902194905,9731640407 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ನಿಗದಿಪಡಿಸಲಾದ ಸಮಯದಲ್ಲಿ ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್ ಓಪನ್ ಮಾಡುವ ಮೂಲಕ ತರಗತಿಗಳನ್ನು ಸೇರಬಹುದು.

https://tinyurl.com/y7agzz2p

YouTube ನಲ್ಲಿ Vpuc Puttur ಸರ್ಚ್ ಮಾಡಿದರೂ ಆಯ್ಕೆ ಲಭ್ಯ.