Friday, April 24, 2026
ಆರೋಗ್ಯಸುದ್ದಿ

ಕೊರೊನಾ ರೋಗಿಗಳಿಗೆ ಪ್ರಾಯೋಗಿಕ 10 ಜನರಿಗೆ ಆಯುರ್ವೇದ ಔಷಧ ನೀಡಿ ; ಡಾ. ಗಿರಿಧರ್ ಕಜೆಯವರನ್ನು ಆಹ್ವಾನಿಸಿ ಮನವಿ ಪುರಸ್ಕರಿಸಿದ ಸಿ.ಎಂ. ಅನುಮತಿ – ಕಹಳೆ ನ್ಯೂಸ್

ಬೆಂಗಳೂರು: ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅವರ ಮನವಿಗೆ ಸ್ಪಂದಿಸಿರುವ ಸಿಎಂ ಬಿ.ಎಸ್​ ಯಡಿಯೂರಪ್ಪ ಸರ್ಕಾರ, ಕೊರೊನಾ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡಲು ಅನುಮತಿ ನೀಡಿದೆ.

ಸಿಎಂ ಯಡಿಯೂರಪ್ಪ  ಅವರ ಆಹ್ವಾನದ ಮೇರೆಗೆ ಡಾ.ಗಿರಿಧರ ಕಜೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆರಂಭಿಕವಾಗಿ 10 ರೋಗಿಗಳಿಗೆ ಪ್ರಾಯೋಗಿಕವಾಗಿ ಈ ಔಷಧ ನೀಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಿಎಂ ಭೇಟಿ ಬಳಿಕ ಕಹಳೆ ನ್ಯೂಸ್​ ಜೊತೆ  ಫೋನ್ ಇನ್ ಮಾಹಿತಿ ನೀಡಿದ ಡಾ. ಗಿರಿಧರ ಕಜೆ, ಆಯುರ್ವೇದಕ್ಕೆ ರಾಜ್ಯ ಸರ್ಕಾರ, ಸಿಎಂ ಮನ್ನಣೆ ಕೊಟ್ಟಿದ್ದು ಸಂತಸದ ವಿಷಯ. ತಾವೂ ಸೂಚಿಸಿರುವ ಔಷಧವನ್ನು ಸರ್ಕಾರ ರೋಗಿಗಳಿಗೆ ನೀಡಲಿದೆ. ಇದು ಖಂಡಿತವಾಗಿಯು ಉತ್ತಮವಾದ ಫಲಿತಾಂಶವನ್ನು ನೀಡಲಿದೆ ಎಂಬ ವಿಶ್ವಾಸವನ್ನು ಡಾ. ಗಿರಿಧರ ಕಜೆ ಅವರು ವ್ಯಕ್ತಪಡಿಸಿದ್ದಾರೆ.