Recent Posts

Sunday, September 13, 2026
ಸುದ್ದಿ

ಕಡಬದಲ್ಲಿ ಎಚ್1ಎನ್1 ಗೆ ಆಟೋ ಚಾಲಕ ಬಲಿ-ಕಹಳೆ ನ್ಯೂಸ್

ಕಡಬ : ಕಡಬದ ಆಟೋ ಚಾಲಕ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ ಶಂಕಿತ ಎಚ್1.ಎನ್1. ಜ್ವರದಿಂದಾಗಿ, ನಿನ್ನೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜಾಹೀರಾತು


ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕರಾಗಿದ್ದ ಇವರು ಕೆಲ ಸಮಯದಿಂದ ಕಡಬದಲ್ಲಿ ಆಟೋ ಚಾಲಕರಾಗಿಯೂ ದುಡಿಯುತ್ತಿದ್ದರು. 20 ದಿನಗಳಿಂದ ಜ್ವರ ಪೀಡಿತರಾಗಿದ್ದ ಅವರು ಮೊದಲು ಕಡಬದಲ್ಲಿ ನಂತರ ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ವಾರದ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಬಳಿಕ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ನಿನ್ನೆ ಎಚ್1ಎನ್1 ಜ್ವರದಿಂದಾಗಿ ಮೃತಪಟ್ಟಿರಿವುದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆಯೂ ಕೋಡಿಂಬಾಳದ ಮಡ್ಯಡ್ಕ, ಮಜ್ಜಾರು, ಪ್ರದೇಶಗಳಲ್ಲಿ ಜ್ವರ ಬಂದು ಕೆಲವು ಮಂದಿ ಮೃತಪಟ್ಟಿದ್ದರು. ಇದಕ್ಕೂ ಸ್ಪಷ್ಟ ಕಾರಣ ಈ ತನಕವೂ ಗೊತ್ತಾಗಿಲ್ಲ.