Recent Posts

Saturday, September 12, 2026
ಸುದ್ದಿ

ಸಂಸ್ಕಾರದಿಂದಲೇ ಬದುಕಿನ ಉನ್ನತಿ ಪಡೆಯಲು ಸಾಧ್ಯ: ಒಡಿಯೂರು ಶ್ರೀ- ಕಹಳೆ ನ್ಯೂಸ್

ಕಡಬ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ಶಕ್ತಿಯಿರುವುದು ಸುಸಂಸಕೃತ ಧರ್ಮಕ್ಕೆ ಮಾತ್ರ. ಮಾನವನ ಬದುಕಿಗೆ ಧರ್ಮವು ಭದ್ರತೆ ನೀಡುತ್ತದೆ ಎಂದು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಗಳು ಹೇಳಿದರು.
ಕಡಬದಲ್ಲಿ ನಡೆದ ಒಡಿಯೂರು ಗುರುದೇವಾನಂದ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಯೋಜನೆ ವತಿಯಿಂದ ನಡೆದ ಗುರುಪಾದುಕಾ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಸಂಸ್ಕಾರಯುತ ಜೀವನದಿಂದ ಬದುಕಿನಲ್ಲಿ ಉನ್ನತಿ ಸಾಧಿಸುವುದರ ಜೊತೆಗೆ ಸಮಾಜ ಪರಿವರ್ತನೆ ಸಾಧ್ಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಗಳು ಹೇಳಿದರು.
ಸುಳ್ಯ ಶಾಸಕ ಎಸ್ ಅಂಗಾರರವರು ಮಾತನಾಡಿ ಸರಕಾರದ ವತಿಯಿಂದ ಬರುವಂತಹ ಹಲವಾರು ಯೋಜನೆಗಳನ್ನು ಜನರ ಬಳಿ ತಲುಪಿಸಲು ಗ್ರಾಮ ವಿಕಾಸದಂತಹ ಯೋಜನೆಗಳು ನನಗೆ ಮಾದರಿ ಮತ್ತು ಮಾರ್ಗದರ್ಶನ ನೀಡುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಸಭೆಯಲ್ಲಿ ಕಡಬ ಉಪ ತಹಶಿಲ್ದಾರರಾದ ನವ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು