ರಾಮನಗರ: ಬಿಗ್ ಬಾಸ್ ಸೀಸನ್- 5ರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಿಗ್ ಬಾಸ್ ಸೆಟ್ ಸುಟ್ಟು ಕರಕಲಾದ ಘಟನೆ ರಾಮನಗರದ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದಿದೆ.
ಜಾಹೀರಾತು
ಸುಮಾರು 3 ಗಂಟೆಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ವಾಗತ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿ ದುರಂತ ಸಂಭವಿಸಿದೆ. ಸುಮಾರು 13 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಹಾಸ ಪಡುತ್ತಿದ್ದಾರೆ.
ಇಡೀ ಬಿಗ್ ಬಾಸ್ ಸೆಟ್‍ಗೆ ಬೆಂಕಿ ಆವರಸಿಕೊಂಡಿದ್ದು, ಮೇಣದ ಮ್ಯೂಸಿಯಂನಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಲವು ಮೇಣದ ಪ್ರತಿಮೆಗಳು ಬೆಂಕಿಗೆ ಆಹುತಿಯಾಗಿದೆ. ವೀಡಿಯೋ ಎಡಿಟಿಂಗ್ ಹಾಗೂ ಬಿಗ್ ಬಾಸ್ ಮನೆಯ ರೆಸ್ಟ್ ಆವರಣದವರೆಗೂ ಹಾಗೂ ಸ್ಪರ್ಧಿಗಳು ಕೂತು ಹರಟೆ ಹೊಡೆಯುತ್ತಿದ್ದ ಅಂಗಳದವರೆಗೂ ಬೆಂಕಿ ವ್ಯಾಪಿಸಿದೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಹೆಚ್ಚಿನದ್ದಾಗಿ ಮರದ ಹಲಗೆಗಳಿಂದ ಈ ಮನೆ ನಿರ್ಮಿಸಿದ್ದು, ಬಿಗ್ ಬಾಸ್ ಮನೆಯ ಒಳಗೆಲ್ಲ ಬೆಂಕಿ ಆವರಿಸಿಕೊಂಡಿದೆ. ಈಗಾಗಲೇ ಒಟ್ಟು 13 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಈಗ ಬೆಂಕಿ ನಂದಿಸಲು ಮತ್ತೆರಡು ವಾಹನಗಳ ಆಗಮಿಸಿದೆ. ರಾಮನಗರ, ಕನಕಪುರದಿಂದ 9 ಅಗ್ನಿಶಾಮಕ ವಾಹನ, ಬಾಷ್ ಮತ್ತು ಟೊಯೋಟಾ ಕಂಪನಿಗಳ 3 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ನಿಯಂತ್ರಣಕ್ಕೆ ಬಾರದ ಬೆಂಕಿ ನಂದಿಸಲು ಅಗ್ನಿಶಾಮಕ ಪಡೆ ಹರಸಾಹಸ ಪಡುತ್ತಿದ್ದಾರೆ.
ಜಾಹೀರಾತು
ಈ ಅಗ್ನಿ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಗ್ನಿ ಅನಾಹುಯತದ ಒಂದಿಷ್ಟು Exclusive ತುಣುಕುಗಳು ಕಹಳೆ ನ್ಯೂಸ್ ನಲ್ಲಿ ಲಭ್ಯ – (Subscribe Our YouTube channel)
ಶ್ರೀಕೃಷ್ಣ ಮಂದಿರ, ನವಜ್ಯೋತಿ ಮಿತ್ರ ಮಂಡಳಿ ಮತ್ತು ಜ್ಯೋತಿ ಮಹಿಳಾ ಮಂಡಲ ಅಮ್ಟೂರು ಇದರ ಸಂಯಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ 40ನೇ ವರ್ಷದ ಮೊಸರುಕುಡಿಕೆ ಉತ್ಸವ ಆಚರಿಸಲಾಯಿತು....
ನವದೆಹಲಿ: ನಮ್ಮ ಬದುಕು ರೂಪುಗೊಳ್ಳುವಲ್ಲಿ ದೇಶ ಮತ್ತು ಸಮಾಜದ ಪಾತ್ರ ಮಹತ್ವದ್ದಾಗಿದ್ದು, ಯುವಜನತೆ ಇದನ್ನು ಎಂದಿಗೂ ಮರೆಯಬಾರದು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ನವದೆಹಲಿಯ...
ಬೆಂಗಳೂರು: ವೈದ್ಯನ ವಿರುದ್ಧ ಯುವತಿಯನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಕೊಡಿಗೆಹಳ್ಳಿಯ ವಿಖ್ಯಾತ್ ಡಯಾಗ್ನೋಸ್ಟಿಕ್ ವೈದ್ಯ ಯುವರಾಜ್ ಮನೋಹರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೇ...
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‍ಬಾಸ್ ಕನ್ನಡ ಸೀಸನ್ 13 ಅದ್ಧೂರಿಯಾಗಿ ಆರಂಭವಾಗಿದೆ. ಗ್ರ್ಯಾಂಡ್ ಓಪನಿಂಗ್ನಲ್ಲಿ ಒಬ್ಬೊಬ್ಬರಾಗಿ ಸ್ಪರ್ಧಿಗಳು ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ, ಕಿರುತೆರೆ,...