Wednesday, April 29, 2026
ಸುದ್ದಿ

ಕಾಸರಗೋಡು: ಮೀನು ಸಾಗಾಟ ವಾಹನದಲ್ಲಿ 20 ಕೆಜಿ ಗಾಂಜಾ ಪತ್ತೆ- ಓರ್ವನ ಬಂಧನ- ಕಹಳೆ ನ್ಯೂಸ್

ಕಾಸರಗೋಡು : ಮೀನು ಸಾಗಾಟ ಮಾಡುತ್ತಿದ್ದ ವಾಹನದಲ್ಲಿ ಸಾಗಿಸುತ್ತಿದ್ದ 20ಕೆಜಿ ಗಾಂಜಾವನ್ನು ಪೊಲೀಸರು ಬುಧವಾರ ಸಂಜೆ ವಶಕ್ಕೆ ಪಡೆದಿದ್ದು ಓರ್ವನನ್ನು ಬಂಧನ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಎರ್ನಾಕುಳಂ ನಿವಾಸಿ ಪಾಯಸ್‌ ಅಮೀನ್‌ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಮೀನು ಹೇರಿಕೊಂಡು ಹೋಗುತ್ತಿದ್ದ ಪಿಕಪ್‌ ವಾಹನವನ್ನು ಪೊಲೀಸರು ನಿಲ್ಲಿಸಲು ಹೇಳಿದ್ದು, ಆ ಸಂದರ್ಭದಲ್ಲಿ ವಾಹನ ಚಾಲಕ ನಿಲ್ಲಿಸದೆ ಅತೀ ವೇಗವಾಗಿ ಚಲಿಸಿದ ಪರಿಣಾಮ ಮಾಯಿಪ್ಪಾಡಿ ಡಯಟ್‌ನ ಗೇಟ್‌ಗೆ ಗೋಡೆಗೆ ಡಿಕ್ಕಿ ಹೊಡೆದು ಮುಗುಚಿದೆ. ಆ ಸಂದರ್ಭದಲ್ಲಿ ಅದರಲ್ಲಿದ್ದ ಮೀನಿನ ಬಾಕ್ಸ್ ಒಳಗಡೆ ಬಚ್ಚಿಟ್ಟ 20ಕೆಜಿಯ ಗಾಂಜಾದ ಪ್ಯಾಕೆಟ್‌ಗಳು ಪತ್ತೆಯಾಗಿದೆ.

ಬಂಧಿತ ಆರೋಪಿ ಹಾಗೂ ತಂಡವು ಕಾಸರಗೋಡು ಪ್ರದೇಶದಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.