Wednesday, April 29, 2026
ಸುದ್ದಿ

ಮದುಮಗಳ ರೂಪದಲ್ಲಿದ್ದ ಪುರುಷ…! : ಮದುವೆಯಾದ 2 ವಾರದ ಬಳಿಕ ಗಂಡನಿಗೆ ಗೊತ್ತಾಯ್ತು ರಹಸ್ಯ- ಕಹಳೆ ನ್ಯೂಸ್

ಮದುವೆ ಖುಷಿಯಲ್ಲಿದ್ದ ಆ ವ್ಯಕ್ತಿ ಈಗ ನೊಂದು ಕುಳಿತಿದ್ದಾರೆ. ಕಾರಣ, ಎರಡು ವಾರಗಳ ಬಳಿಕ ಗೊತ್ತಾದ ರಹಸ್ಯ ಇವರ ಜೀವನದ ಖುಷಿಯನ್ನೇ ನುಂಗಿದೆ…! ಯಾಕೆಂದರೆ, ಈ ವ್ಯಕ್ತಿ ಮದುವೆಯಾಗಿದ್ದು ಮಹಿಳೆಯನ್ನಲ್ಲ… ಪುರುಷನನ್ನು…!

ಮದುವೆಯಾದ ಎರಡೇ ವಾರದಲ್ಲಿ ತನ್ನ ಪತ್ನಿ ಮಹಿಳೆಯಲ್ಲ, ಪುರುಷ ಎಂಬ ಸಂಗತಿ ಗೊತ್ತಾದರೆ ನವವಿವಾಹಿತನ ಪರಿಸ್ಥಿತಿ ಹೇಗಾಗಬಹುದು…? ಖಂಡಿತಾ ಆಕಾಶವೇ ಕಳಚಿ ಬಿದ್ದಂತಹ ಅನುಭವವಾಗುತ್ತದೆ. ನಂಬಿ ಮೋಸ ಹೋದೆನಲ್ವಾ ಎಂದು ಮನಸ್ಸು ನೊಂದುಕೊಳ್ಳುತ್ತದೆ… ಸದ್ಯ ಇದೇ ಸ್ಥಿತಿಯಲ್ಲಿದ್ದಾರೆ ಉಗಾಂಡದ ಮೊಹಮ್ಮದ್ ಮುತುಂಬ. ಎರಡು ವಾರಗಳ ಹಿಂದಷ್ಟೇ ಹೊಸ ಜೀವನ ಆರಂಭಿಸಿದ್ದ ಮೊಹಮ್ಮದ್ ಅವರಿಗೆ ಜೀವನದಲ್ಲಿ ಎಂದೂ ಮರೆಯಲಾರದಂತಹ ಅನುಭವವಾಗಿದೆ. ಬಹುದೊಡ್ಡ ವಂಚನೆಯಿಂದ ಇವರು ಜೀವನದ ಖುಷಿಯನ್ನೇ ಕಳೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಎರಡು ವಾರಗಳ ಹಿಂದೆ ಮೊಹಮ್ಮದ್ ಮತ್ತು ಮದುಮಗಳು ಸಾಂಪ್ರದಾಯಿಕ ನಿಖಾ ಕಾರ್ಯಕ್ರಮದಲ್ಲಿ ದಾಂಪತ್ಯದ ಬದ್ಧತೆ ದಾಖಲಿಸಿಕೊಂಡಿದ್ದರು. ದಾಂಪತ್ಯದ ಕರಾರಿಗೂ ಇವರು ಸಹಿ ಹಾಕಿದ್ದರು. ಆದರೆ, ಮದುವೆಯಾದ ಬಳಿಕ ದಂಪತಿ ಒಟ್ಟು ಸೇರಿರಲಿಲ್ಲ. ಕಾರಣ, ತಾನು ಋತುಮತಿಯಾಗಿದ್ದೇನೆಂದು ವಧು ಗಂಡನ ಬಳಿ ಹೇಳಿದ್ದಳು. ಪಾಪ ಮೊಹಮ್ಮದ್ ಮುತುಂಬ ಅವರೂ ಇದನ್ನು ನಂಬಿದ್ದರು. ಪತ್ನಿ ಮರಳಿ ತನ್ನೆಡೆಗೆ ಬರುವ ತನಕ ಇವರು ಕಾದಿದ್ದರು.

ನೆರೆಹೊರೆಯವರು ಪತ್ತೆಹಚ್ಚಿದ್ದರು ರಹಸ್ಯ…!
ಮೊಹಮ್ಮದ್ ತನ್ನ ಪತ್ನಿಯ ಬರುವಿಕೆಗಾಗಿ ಕಾಯುತ್ತಿದ್ದರೆ, ನೆರೆಹೊರೆಯವರು `ವಧು’ವಿನ ದೊಡ್ಡ ರಹಸ್ಯವನ್ನು ಕಂಡು ಹಿಡಿದಿದ್ದರು. ಅದೇನೆಂದರೆ, ಮುತುಂಬ ಅವರ ಇವರ `ಪತ್ನಿ’ ಗೋಡೆ ಹಾರಿ ಟೀವಿ, ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಕದಿಯುವುದನ್ನು ನೆರೆಹೊರೆಯವರು ನೋಡಿದ್ದರು. ಜೊತೆಗೆ, ಇವರಿಗೂ ಈ `ಮಹಿಳೆ’ಯ ಬಗ್ಗೆ ಅನುಮಾನ ಬಂದಿತ್ತು. ಹೀಗಾಗಿ, ನೆರೆಹೊರೆಯವರು ಪೊಲೀಸರಿಗೆ ದೂರು ಕೊಟ್ಟಿದ್ದರು.

ಮಹಿಳಾ ಅಧಿಕಾರಿ ಶಾಕ್…!
ಪಕ್ಕದ ಮನೆಯವರು ದೂರು ಕೊಟ್ಟ ಬಳಿಕ ಮೊಹಮ್ಮದ್ ತನ್ನ ಪತ್ನಿಯೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದರು. ಸಾಂಪ್ರದಾಯಿಕ ಧಿರಿಸು ಧರಿಸಿದ್ದರಿಂದ ತಕ್ಷಣಕ್ಕೆ ವಧುವಿನ ಬಗ್ಗೆ ಮೇಲ್ನೋಟಕ್ಕೆ ಅನುಮಾನ ಬಂದಿರಲಿಲ್ಲ. ಈ ವೇಳೆ, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮುತುಂಬ ಪತ್ನಿಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ತಪಾಸಣೆ ನಡೆಸಿದರು. ಆಗ ಆ ಮಹಿಳಾ ಅಧಿಕಾರಿ ಶಾಕ್ ಆಗಿದ್ದರು. ಯಾಕೆಂದರೆ, ವಧು ಹುಡುಗಿಯೇ ಆಗಿರಲಿಲ್ಲ. ಅಲ್ಲಿ ವಧುವಿನ ರೂಪದಲ್ಲಿ ಒಬ್ಬ ಪುರುಷನಿದ್ದ…!

ವಿಚಾರಣೆ ವೇಳೆ ಹಣಕ್ಕಾಗಿಯೇ ತಾನು ಹೀಗೆ ಮಾಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. ತುಂಬಾ ವ್ಯವಸ್ಥಿತವಾಗಿಯೇ ಈತ ಈ ಸಂಚು ಹೂಡಿದ್ದ. ಆದರೆ, ಈಗ ಮಾಡಬಾರದ ಕೆಲಸ ಮಾಡಿ ಈ ಆರೋಪಿ ಕಂಬಿ ಎಣಿಸುತ್ತಿದ್ದಾನೆ.