
ಕಳೆದ 12 ವರ್ಷಗಳಿಂದ ಮಡಿಕೇರಿಯಲ್ಲಿ ವೈವಿಧ್ಯಮಯ ಚಿನ್ನಾಭರಣಗಳು ಹಾಗೂ ವಿಶ್ವಾಸಾರ್ಹ ವ್ಯವಹಾರದೊಂದಿಗೆ ಕೊಡಗಿನ ಜನತೆಯ ಮನಗೆದ್ದಿರುವ 75 ವರ್ಷಗಳ ಸುಧೀರ್ಘ ಗ್ರಾಹಕ ಸಂತೃಪ್ತಿಯ ಇತಿಹಾಸ ಇರುವ ಮುಳಿಯ ಜ್ಯುವೆಲ್ಸ್ ಈಗ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.
ಮಡಿಕೇರಿಯ ಮಹಾದೇವಪೇಟೆಯಲ್ಲಿ 12 ವರ್ಷಗಳ ಹಿಂದೆ, ಮೊತ್ತ ಮೊದಲ ಹವಾನಿಯಂತ್ರಿತ ವ್ಯವಸ್ಥೆಹೊಂದಿದ ವಿಶಾಲ ಶೋರೂಮ್ ಎನ್ನುವ ಹೆಗ್ಗಳಿಕೆಯೊಂದಿಗೆ ಆರಂಭವಾದ ಮುಳಿಯ ಜ್ಯುವೆಲ್ಸ್‍ನ ಶಾಖೆ ಇದೇ ಜ. 18 ರಂದು ಈಗಿನ ಶೋರೂಮ್ ಸಮೀಪದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ.
ಬಹು ಅಂತಸ್ತಿನ ಮೂರು ಸಾವಿರ ಚದರ ಅಡಿಯ ನೂತನ ಶೋರೂಮ್ಎಲ್ಲಾ ಅತ್ಯಾಧುನಿಕ ಹಾಗೂ ಹವಾನಿಯಂತ್ರಿತ
ವ್ಯವಸ್ಥೆಯನ್ನು ಹೊಂದಿದೆ. ಮಾತ್ರವಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಕಟ್ಟಡದ ಬೇಸ್ಮೆಂಟ್ ನಲ್ಲಿ ವಾಹನ ಪಾರ್ಕಿಂಗ್
ವ್ಯವಸ್ಥೆ ಕಲ್ಪಿಸಲಾಗಿದೆ. ಶೋರೂಮ್‍ಗೆ ಎರಡು ಕಡೆಯಿಂದ ಪ್ರವೇಶವಿದ್ದು ಗ್ರಾಹಕರು ಮಹದೇವಪೇಟೆ ಮತ್ತು ಗಣಪತಿ ಸ್ಟ್ರೀಟ್ ಕಡೆಯಿಂದ ಪ್ರವೇಶಿಸಬಹುದು.
ಮುಳಿಯದ ಚೇರ್ಮನ್ & amp ಮ್ಯಾನೆಂಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ ಪ್ರಪ್ರಥಮ ಬಾರಿಗೆ ಕೊಡಗಿನ ಪಾರಂಪರಿಕ ಆಭರಣಗಳನ್ನು ಶುದ್ಧ 916 ಬಂಗಾರದಲ್ಲಿ ತಯಾರಿಸಿ ಜಾಗತಿಕ ಮನ್ನಣೆಗಳಿಸಿದ ಹೆಗ್ಗಳಿಕೆ ಮುಳಿಯ ಜ್ಯುವೆಲ್ಸ್‍ನದ್ದು.
ಕಾರ್ಯಕ್ರಮ ವಿವರ :
ಮುಳಿಯ ಜ್ಯುವೆಲ್ಲರ್ಸ್‍ನ ನೂತನ ಶೋರೂಂ ಉದ್ಘಾಟನಾ
ಕಾರ್ಯಕ್ರಮದಲ್ಲಿ ಚಿತ್ರನಟಿ ಹರ್ಷಿಕಾ ಪೂಣಚ್ಚ

ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ (ಸನ್ನಿಧಿ)

ಪಾಲ್ಗೊಳ್ಳಲಿದ್ದಾರೆ.
ಚಿತ್ರ ನಟಿಯರೊಂದಿಗೆ ಗ್ರಾಹಕರಿಗೆ ಸೆಲ್ಫಿತೆಗೆಯುವ ಅವಕಾಶವಿರುತ್ತದೆ.
ಸಮಾರಂಭದಲ್ಲಿ ಗಣ್ಯ ಅತಿಥಿಗಳಾಗಿ :-
* ಶ್ರೀ ಕೆ.ಜಿ. ಬೋಪಯ್ಯ, ಮಾಜಿ ವಿಧಾನಸಭಾಧ್ಯಕ್ಷರು,
ಶಾಸಕರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ
* ಶ್ರೀ ಎಂ.ಪಿ.ಅಪ್ಪಚ್ಚು ರಂಜನ್, ಶಾಸಕರು, ಮಡಿಕೇರಿ
ವಿಧಾನಸಭಾ ಕ್ಷೇತ್ರ
* ಶ್ರೀಮತಿ ಶಾಂತೆಯಂಡ ವೀಣಾ ಅಚ್ಚಯ್ಯ, ವಿಧಾನ ಪರಿಷತ್
ಸದಸ್ಯರು
* ಶ್ರೀ ಎಂ.ಪಿ. ಸುನಿಲ್ ಸುಬ್ರಮಣಿ, ವಿಧಾನ ಪರಿಷತ್ ಸದಸ್ಯರು
* ಶ್ರೀ ಕೆ.ಎಂ.ಬಿ ಗಣೇಶ್ , ಜೆ.ಡಿ.ಎಸ್. ಅಧ್ಯಕ್ಷರು, ಕೊಡಗು
ಜಿಲ್ಲೆ
* ಶ್ರೀ ಮುಳಿಯ ಶ್ಯಾಮ ಭಟ್, ದಿಗ್ದರ್ಶಕರು, ಮುಳಿಯ
ಸಮೂಹ ಸಂಸ್ಥೆ
ಇವರುಗಳು ಪಾಲ್ಗೊಳ್ಳಲಿದ್ದಾರೆ.
ಮುಳಿಯ ಹೊಸ ಶೋರೂಂ ವಿಶೇಷತೆಗಳು :
* ವಿಶಾಲ ಹಾಗೂ ಹವಾನಿಯಂತ್ರಿತ ಶೋರೂಂ
* ಪಾರ್ಕಿಂಗ್ ವ್ಯವಸ್ಥೆ
* ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ* ಚಿನ್ನ ಕೊಳ್ಳುವ ಅಪೂರ್ವ ಅನುಭವ
* ಮುಳಿಯದ ಎಲ್ಲಾ ಆಭರಣಗಳು 916 ಹಾಲ್‍ಮಾರ್ಕ್
ಶುದ್ಧತೆ
* ಗ್ರಾಹಕ ಸ್ನೇಹಿ, ಪ್ರಾಮಾಣಿಕ ಮತ್ತು ಪಾರದರ್ಶಕ
ವಿಶ್ವಾಸಾರ್ಹ ವ್ಯವಹಾರ
* ಅಪ್ರತಿಮ ಆಯ್ಕೆ
* ಬೆಳ್ಳಿಯ ಹಾಗೂ ವಜ್ರದ ಆಭರಣಗಳ ವಿಶೇಷ ಸಂಗ್ರಹ
* ನುರಿತ, ಅನುಭವಿ ಸಿಬ್ಬಂದಿ ವರ್ಗ
* ಮದುವೆ ಆಭರಣಗಳ ಅಪ್ರತಿಮ ಆಯ್ಕೆಯ ಅವಕಾಶ
* ಕೊಡಗು ಪಾರಂಪರಿಕ ಆಭರಣಗಳ ಅಪೂರ್ವ
ಸಂಗ್ರಹ









