
ಬೆಳ್ತಂಗಡಿ : ಭೋಪಾಲದಲ್ಲಿ ಕಾಂಗ್ರೆಸ್ಸಿನ ಸೇವಾದಳದ ತರಬೇತಿ ಶಿಬಿರದಲ್ಲಿ ‘ವೀರ ಸಾವರಕರ-ಕಿತನೆ ‘ವೀರ’ ?’ (ವೀರ ಸಾವರಕರ ಎಷ್ಟು ವೀರರು?) ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದಲ್ಲಿ ಅತ್ಯಂತ ತುಚ್ಛ, ಸ್ವಾ. ಸಾವರಕರದ್ವೇಷ ಹಾಗೂ ಕಟ್ಟುಕಥೆಗಳನ್ನು ಬರೆಯಲಾಗಿದೆ.
ಇದರಿಂದ ಕಾಂಗ್ರೆಸ್‍ನವರು ಸ್ವಾತಂತ್ರ್ಯವೀರರನ್ನು ಅವಮಾನಿಸಲು ಎಷ್ಟು ಕೀಳ್ಮಟ್ಟಕ್ಕೆ ಹೋಗಬಹುದು, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಸ್ವಾ. ಸಾವರಕರರμÉ್ಟೀ ಅಲ್ಲದೇ ಯಾವುದೇ ರಾಷ್ಟ್ರಪುರುಷರ ಹಾಗೂ ಕ್ರಾಂತಿಕಾರರ ಅವಮಾನವು ಯಾರಿಂದಲೂ ಆಗದಿರಲಿ, ಅದಕ್ಕಾಗಿ ಕೇಂದ್ರ ಸರಕಾರವು ಇದರ ಬಗ್ಗೆ ಕೂಡಲೇ ಕಾನೂನನ್ನು ರೂಪಿಸುವ ಆವಶ್ಯಕತೆ ಇದೆ. ಕಾಂಗ್ರೆಸ್‍ನವರು ವಿತರಿಸಿದ ಪುಸ್ತಕದಿಂದ ದೇಶದಲ್ಲಿ ಕೋಮು ಹಾಗೂ ಜಾತಿಯ ಒತ್ತಡವನ್ನು ನಿರ್ಮಿಸಿ ಸಮಾಜದಲ್ಲಿ ಅಶಾಂತಿಯನ್ನು ನಿರ್ಮಿಸುವ ಸಂಚಿರುವುದು ಗಮನಕ್ಕೆ ಬರುತ್ತದೆ.
ಕಾಂಗ್ರೆಸ್ಸಿನ ಸ್ವಾ. ಸಾವರಕರದ್ವೇಷ, ಇದು ಸಂಪೂರ್ಣ ಕ್ರಾಂತಿಕಾರಿ ಚಳುವಳಿಯ ದ್ವೇಷವಾಗಿದ್ದು ಈ ಅಕ್ಷೇಪಾರ್ಹ ಪುಸ್ತಕವನ್ನು ಕೂಡಲೇ ನಿμÉೀಧಿಸಬೇಕು ಮತ್ತು ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬೆಳ್ತಂಗಡಿ ತಾಲೂಕಿನ ಉಪತಹಶೀಲ್ದಾರ್ ಸುಬ್ರಹ್ಮಣ್ಯ ಹಾಗೂ ಪೆÇೀಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಇವರಿಗೆ ಮನವಿಯನ್ನು ನೀಡಲಾಯಿತು.









