ವಿದ್ಯಾರ್ಥಿಗಳಿಂದ ಪೊಲೀಸ್ ಇಲಾಖೆಯ ಹಗಲು ರಾತ್ರಿ ಶಾಂತಿ ಕಾಪಾಡಲು ಪಡುತ್ತಿರುವ ಶ್ರಮಕ್ಕೆ ಪ್ರಶಂಸನಾ ಪತ್ರ-ಕಹಳೆ ನ್ಯೂಸ್

ಜ್ಞಾನ ಸಂಜೀವಿನಿ ವತಿಯಿಂದ, ನಮ್ಮ ಊರನ್ನು ಕಾಯುವ ನಿಜ ಜೀವನದ ಹೀರೋಗಳಾದ ಆರಕ್ಷಕರು ಹಗಲು ರಾತ್ರಿ ಊರಿನ ಶಾಂತಿ ಕಾಪಾಡಲು ಶ್ರಮಿಸುತ್ತಿರುವ ಬಗ್ಗೆ ಎರಡು ಒಳ್ಳೆಯ ಮಾತುಗಳನ್ನು ಹೊತ್ತ ಪ್ರಶಂಸನಾ ಪತ್ರವನ್ನು ಮಂಗಳೂರು ಪೊಲೀಸ್ ಇಲಾಖೆಯ ಪ್ರಮುಖರಾದ ಶ್ರೀ ಎಮ್.ಜಗದೀಶ್ (ಪೊಲೀಸ್ ಉಪ ಆಯುಕ್ತರು) ಹಾಗು ಪ್ರದೀಪ್ ಟಿ.ಆರ್ (ಪೊಲೀಸ್ ಉಪ ನಿರೀಕ್ಷಕರು) ಇವರಿಗೆ ನೀಡಲಾಯಿತು.
ತಾವುಗಳು ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಹಗಲು ರಾತ್ರಿ ಕಷ್ಟ ಪಟ್ಟು ಶಾಂತಿಯನ್ನು ಕಾಪಾಡಿ ಹಾಗು ಕಾರ್ಯಾಚರಣೆ ಮಾಡಿ ಕಿಡಿಗೇಡಿಗಳನ್ನು ಹಿಡಿದರೂ ತಮ್ಮ ಬಗ್ಗೆ ಗೌರವದ ಭಾವ ಬಿಟ್ಟು ಖಂಡನೆಯ ಭಾವ ಇರುವುದರ ಬಗ್ಗೆ ನಾವು ಬೇಸರ ವ್ಯಕ್ತಪಡಿಸಿದಾಗ, ಪೊಲೀಸ್ ಇಲಾಖೆಯ ಮೇಲೆ ಇರುವ ಹಲವು ಖಂಡನೆಗಳ ಮಧ್ಯೆ ಇಂತಹದೊಂದು ಕಾರ್ಯಕ್ಕೆ ನಾವು ಮುಂದೆ ಬಂದದಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದರು.ಪತ್ರ ಸ್ವೀಕರಿಸುವಾಗ ಅವರ ಮುಖದಲ್ಲಿದ್ದ ಮಂದಹಾಸವು ನಮಗೆ ನೆಮ್ಮದಿ ಹಾಗು ಸ್ಪೂರ್ತಿಯನ್ನು ನೀಡಿತು.

ಈ ಸಂದರ್ಭದಲ್ಲಿ ಪ್ರಮುಖರಾದ ವರುಣ್ ಶೇಣವ, ಸಾಕ್ಷಾತ್ ಶೆಟ್ಟಿ, ವಿನೀತ್ ಪುತ್ರನ್, ದೀಕ್ಷಿತ್ ಕುಲಾಲ್, ಶಿವ ಪ್ರಸಾದ್, ಜೀವನ್ ರೈ, ಸ್ವಸ್ತಿಕ್ ಆಳ್ವ, ಪ್ರಜ್ವಲ್ ಶೇಣವ ಹಾಗು ಕೀರ್ತನ್ ದಾಸ್ ಉಪಸ್ಥಿತರಿದ್ದರು.









