ಹುಡುಗಿ ಆಸೆಗೆ ಜೊಲ್ಲು ಸುರಿಸುವ ಕಾಮಣ್ಣರೇ ಇವರ ಟಾರ್ಗೆಟ್..!? ಪ್ರತಿಷ್ಠಿತ ರೆಸಾರ್ಟ್ ನಲ್ಲೇ ಹನಿ ಟ್ರ್ಯಾಪ್ – ಮಂಚ ಹತ್ತಿಸಿ ರೈಡ್ ಮಾಡಿ ಸುಲಿಗೆಮಾಡೋ ದಂಗೆಕೋರರ ಹೆಡೆಮುರಿಕಟ್ಟಿದ ಉಪ್ಪಿನಂಗಡಿ ಪೋಲೀಸರು – ಕಹಳೆ ನ್ಯೂಸ್

ಉಪ್ಪಿನಂಗಡಿ : ಜ 9: ಉಪ್ಪಿನಂಗಡಿಯ ರಾಷ್ತ್ರೀಯ ಹೆದ್ದಾರಿಯ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ ಸೇರಿದ ರೆಸಾರ್ಟ್ ಒಂದರಲ್ಲಿ ಹನಿ ಟ್ರ್ಯಾಪ್ ದಂಧೆ ನಡೆಸುತಿದ್ದ ಪ್ರಕರಣವೊಂದನ್ನು ಕೇರಳಾ ಪೋಲೀಸರ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದಾರೆ.
ಇಬ್ಬರನ್ನು ವಶ ಪಡಿಸಿಕೊಂಡು ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಕುಶಾಲನಗರದ ಲೋಹಿತ್ ಮತ್ತು ವಿಟ್ಲದ ಶರೀಪ್ ಪೊಲೀಸ್ ವಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಯುವತಿಯರು ಸೇರಿ ಒಟ್ಟು 7 ಜನರ ತಂಡ ಈಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದೆ. ಆದರೆ ಖಚಿತವಾಗಿ ಏನು ನಡೆದಿದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಷ್ಟೆ. ದಂಧೆಕೋರರು ಮಂಗಳೂರು ಮೂಲದ ಯುವತಿಯರನ್ನು ಬಳಸಿ ಈ ದಂಧೆ ನಡೆಸುತಿದ್ದು ಇವರಿಗೆ ಸೇರಿದ ಮನೆಯೊಂದು ಪುತ್ತೂರಿನ ಸಾಲ್ಮರದಲ್ಲಿ ಇದೆ. ತಮ್ಮ ಸಂಪರ್ಕಕ್ಕೆ ಬರುವ ಯುವಕರನ್ನು ಸಾಲ್ಮರದ ತಮ್ಮ ಮನೆಗೆ ಕರೆಯಿಸಿಕೊಂಡು ಅಲ್ಲಿ ತಮ್ಮಲ್ಲಿರುವ ಯುವತಿಯರನ್ನು ಜೋಡಿಯಾಗಿಸಿ ಬಳಿಕ ಅವರನ್ನು ಉಪ್ಪಿನಂಗಡಿಯ ರೆಸಾರ್ಟ್ ಗೆ ಕಳುಹಿಸುತಿದ್ದರು ಎಂದು ಹೇಳಲಾಗುತ್ತಿದೆ.
ಬಳಿಕ ಜೋಡಿಗಳು ತಂಗಿರುವ ಕೊಟಡಿಗೆ ಈ ದಂಧೆಕೋರರು ದಾಳಿ ನಡೆಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ಪೀಕಿಸುತಿದ್ದರು ಎನ್ನಲಾಗುತ್ತಿದೆ. ಇಂತಾಹುದೇ ಒಂದು ಕೃತ್ಯ ಜ 8 ರಂದು ನಡೆದು ಅದು ಕೇರಳ ಪೊಲೀಸರ ಮೂಲಕ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ದೊರೆತಿದ್ದು , ಅವರು ದಾಳಿ ನಡೆಸಿದಾಗ ಈ ದಂಧೆ ಬಹಿರಂಗವಾಗಿದೆ. ಆರೋಪಿಗಳ ಪೈಕಿ ಲೋಹಿತ್ ಹಾಗೂ ಷರೀಫ್ ಪೊಲೀಸ್ ವಶದಲ್ಲಿದ್ದರೇ,, ವಿಟ್ಲದ ಜಮಾಲ್ ,ಜೀವನ್ ಹಾಗೂ ನೌಶಾದ್ ಪರಾರಿಯಾಗಿದ್ದಾರೆ.
ಆರೋಪಿಗಳು ಬಳಸಿದ್ದ ಇನ್ನೋವಾ ಕಾರನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಆರೋಪಿಗಳ ಪೈಕಿ ಜಮಾಲು ಹಾಗೂ ಲೋಹಿತ್ ಹನಿಟ್ರ್ಯಾಪ್ ಕುಖ್ಯಾತರಾಗಿದ್ದೂ, ಇವರ ವಿರುದ್ದ ಹಲವು ಪ್ರಕರಣಗಳಿವೆ .
ಘಟನೆ ಏನು ..?
ಉಪ್ಪಿನಂಗಡಿಯ ಆ ರೆಸಾರ್ಟ್ ನಲ್ಲಿ 2 ಜೋಡಿಗಳು ಇದ್ದ ಸಂಧರ್ಭ ದಾಳಿ ಮಾಡಿದ ಐವರ ತಂಡ , ತಾವು ಕೇರಳದ ಪೊಲೀಸರೆಂದು ಹೇಳಿಕೊಂಡು ಅವರನ್ನು ಬೆದರಿಸಿ ಸುಲಿಗೆಗೆ ಯತ್ನಿಸಿದ್ದ ಬಗ್ಗೆ ಕೇರಳ ಪೊಲೀಸರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆ ಎರಡು ಜೋಡಿಗಳನ್ನು ಸಾಲ್ಮರದ ತಮ್ಮ ಮನೆಯಲ್ಲಿ ಜೋಡಿಯಾಗಿಸಿ ಆರೋಪಿಗಳು ಉಪ್ಪಿನಂಗಡಿಗೆ ಕಳುಹಿಸಿದ್ದರು. ಬಳಿಕ ಆರೋಪಿಗಳು ಈ ಜೋಡಿಗಳು ತಂಗಿದ್ದ ಕೊಟಡಿಗೆ ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿದ್ದರು. ಅದರೆ ಈ ಜೋಡಿಗಳ ಪೈಕಿ ಓರ್ವ ಕೇರಳದ ತನ್ನ ಸಂಬಂಧಿ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದ. ಅವರ ಸೂಚನೆಯಂತೆ ಯುವಕ ತಾವು ತಂಗಿರುವ ರೆಸಾರ್ಟ್ ಮತ್ತು ಲೋಕೇಶನ್ ಬಗ್ಗೆ ಅವರಿಗೆ ಮಾಹಿತಿ ರವಾನಿಸಿದ್ದು , ಈ ಮಾಹಿತಿಯನ್ನು ಕೇರಳದ ಪೊಲೀಸ್ ಅಧಿಕಾರಿ ಉಪ್ಪಿನಂಗಡಿ ಪೊಲೀಸರಿಗೆ ತಿಳಿಸಿದ್ದರು. ಸಿಐ ನಾಗೇಶ್ ಕದ್ರಿ ಹಾಗೂ ಎಸ್ ಐ ಈರಯ್ಯ ನೇತ್ರತ್ವದ ತಂಡ ರೆಸಾರ್ಟ್ ಗೆ ದಾಳಿ ನಡೆಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಾವುದೇ ಖಚಿತ ಮಾಹಿತಿ ಇನ್ನು ಲಭಿಸಿಲ್ಲ ಮತ್ತು ಈ ಪ್ರಕರಣದಲ್ಲಿ ರೆಸಾರ್ಟ್ ಮಾಲೀಕರು ಹಾಗೂ ಸಿಬ್ಬಂದಿಯ ಕೈವಾಡದ ಬಗ್ಗೆಯೂ ಖಚಿತತೆ ಇಲ್ಲ.









