
ವೇಣೂರು ಪರಿಸರದಲ್ಲಿ ಸ್ಥಳಿಯ ಗಾನ ಪ್ರತಿಭೆಗಳ ಅನಾವರಣ ಸ್ಥಳೀಯ ಗಾನ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ನಿಟ್ಟಿನಲ್ಲಿ “ಮುಳಿಯ ಗಾನ ರಥ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಾಯೋಗಿಕವಾಗಿ ದಿನಾಂಕ 12, ಜನವರಿ 2020 ಭಾನುವಾರ ಅನಾವರಣಗೊಳ್ಳಲಿದೆ. ವೇಣೂರು
ಗಾರ್ಡನ್ ವ್ಯೂ ವಠಾರದಲ್ಲಿ ಸ್ಥಳೀಯ ಗಾಯಕ, ಗಾಯಕಿಯರು ತುಳು, ಕನ್ನಡ, ಹಿಂದಿ ಹಾಡುಗಳನ್ನು ಹಾಡಲಿದ್ದಾರೆ.
ವಯೋಮಿತಿ 12 ರಿಂದ 21 ವರ್ಷ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ 21 ವರ್ಷ ಮೇಲ್ಪಟ್ಟ ಸಾರ್ವಜನಿಕರ ವಿಭಾಗ. ಈ ಎರಡೂ ವಿಭಾಗಗಳಲ್ಲಿ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ರಮವು ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಐದು ವಲಯಗಳ ಮೂಲಕ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರನ್ನು ಅಂತಿಮ ಸುತ್ತಿನ –ಗ್ರ್ಯಾಂಡ್ ಫಿನಾಲೆಯಲ್ಲಿ ಬೆಳ್ತಂಗಡಿ “ಮುಳಿಯ ಗಾನ ಕೋಗಿಲೆ” ಎಂಬ ಬಿರುದು ನೀಡಿ ಪುರಸ್ಕರಿಸಲಾಗುವುದು ಎಂದು ಸಂಸ್ಥೆಯ ಛ್ಯಾರ್‍ಮನ್ ಹಾಗೂ ಆಡಳಿತ ನಿರ್ದೇಶಕರಾದ ಕೇಶವ ಪ್ರಸಾದ್
ಮುಳಿಯ ತಿಳಿಸಿದ್ದಾರೆ.
ಈ ಕಾರ್ಯಕ್ರಮ ಭಾರತ ಸರ್ಕಾರ ಕ್ರೀಡಾ ಸಚಿವಾಲಯ ಯುವ ಪ್ರಶಸ್ತಿ ಪುರಸ್ಕøತ ಜನಪದ ಕಲಾವಿದ, ಹಿನ್ನೆಲೆ ಗಾಯಕ ಉದಯ ಕುಮಾರ್ ಲಾಯಿಲರವರ ಸಾರಥ್ಯದಲ್ಲಿ ನಡೆಯಲಿದೆ.
ಈಗಾಗಲೇ 17 ಜನ ಆಸಕ್ತರು ಹೆಸರು ನೋಂದಾಯಿಸಿದ್ದು, ಇನ್ನು 15 ಪ್ರತಿಭೆಗಳಿಗೆ ಅವಕಾಶವಿದೆ. ಜನವರಿ 10 ಶುಕ್ರವಾರ 2020 ರ ಮುಂಚಿತವಾಗಿ ಆಸಕ್ತರು ಹೆಸರನ್ನು ನೋಂದಾಯಿಸಬೇಕೆಂದು ಹಾಗೂ ಈ ಕುರಿತ ಆಡಿಷನ್ ಕಾರ್ಯಕ್ರಮ ನಡೆಯಲಿದೆ. ಎಂದು ಮುಳಿಯ ಬೆಳ್ತಂಗಡಿಯ ಶಾಖಾ ಪ್ರಬಂಧಕ ಪ್ರವೀಣ್
ತಿಳಿಸಿರುತ್ತಾರೆ.
ಗ್ರ್ಯಾಂಡ್ ಫೈನಲ್‍ನಲ್ಲಿ ಗೆದ್ದ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಮುಳಿಯ ಗಾನ ಕೋಗಿಲೆ ಪ್ರಶಸ್ತಿಯೊಂದಿಗೆ ಚಿನ್ನದ ನಾಣ್ಯ ಹಾಗೂ ಒಟ್ಟು ಆರು ವಲಯಗಳಲ್ಲಿ ಭಾಗವಹಿಸಿದ ಎಲ್ಲ ಉದಯೋನ್ಮುಖ ಹಾಡುಗಾರ ಪ್ರತಿಭೆಗಳಿಗೆ ಬೆಳ್ಳಿ ನಾಣ್ಯಗಳನ್ನು ನೀಡಿ ಗೌರವಿಸಲಾಗುವುದು.
ಕರೋಕೆ ಹಾಡುಗಳ ಈ ಸಂಗೀತ ರಸ ಸಂಜೆಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಒಂದು ವೇದಿಕೆ ನೀಡಿ ಹಾಡುಗಳನ್ನು ಹಾಡಿಸಿ ಜನ ಸಮೂಹಕ್ಕೆ ಪ್ರತಿಭೆಗಳನ್ನು ಪ್ರಸ್ತುತಪಡಿಸುವ ಈ ಕಾರ್ಯಕ್ರಮಕ್ಕೆ ಅಪಾರ ಮೆಚ್ಚುಗೆ ಹಾಗೂ ಜನಮನ್ನಣೆ ದೊರೆಯುವ ನಿರೀಕ್ಷೆ ಇದೆ ಎಂದು ಉದಯ ಕುಮಾರ್ ಲಾಯಿಲ ಅವರು
ಹೇಳಿದ್ದಾರೆ.









