Thursday, May 14, 2026
ಸುದ್ದಿ

ಜನವರಿ 4 ರಂದು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಕ್ರೀಡೋತ್ಸವ – ವಾರ್ಷಿಕೋತ್ಸವದ ಸಂಭ್ರಮ ; ಮಕ್ಕಳ ಸಾಂಸ್ಕೃತಿಕ ಕಲರವ – ಗಣ್ಯಾತಿ ಗಣ್ಯರ ಸಮಾಗಮ – ಕಹಳೆ ನ್ಯೂಸ್

ನರಿಮೊಗರು : ಇಲ್ಲಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಶಿಶು ಮಂದಿರ,ಪ್ರಾಥಮಿಕ,ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾರ್ಷಿಕೋತ್ಸವ ಹಾಗೂ ಹೊನಲು ಬೆಳಕಿನ ಕ್ರೀಡೋತ್ಸವ ಜ.4ರಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ ವಹಿಸುವರು.ಅತಿಥಿಗಳಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು,ಮಂಗಳೂರು ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ .ಎಂ.ಬಿ.ಪುರಾಣಿಕ್, ಪುತ್ತೂರು ವಿವೇಕಾನಂದ ಶಿಕ್ಷಕ ತರಬೇತಿ ಕಾಲೇಜಿನ ಪ್ರಾಚಾರ್ಯ ಡಾ.ದಿನೇಶ್ಚಂದ್ರ ಟಿ,ಕೃಷಿಕ ರಾಧಾಕೃಷ್ಣ ರೈ ಎಸ್ ಸಣಂಗಳ,ಎಲ್.ಐ.ಸಿ ಎಂಪವರ್ಡ್ ಏಜೆಂಟ್ ಹಾಗೂ ಹಾಸನದ ಉದ್ಯಮಿ ಎಂ.ಟಿ.ದೊರೆಸ್ವಾಮಿ,ಮೆಂಟರ್ ಗ್ರಾಫಿಕ್ಸ್ ಶ್ರೀಹರಿ ಓಣಿಯಡ್ಕ ಪಾಲ್ಗೊಳ್ಳುವರು , ಕ್ರೀಡೋತ್ಸವದಲದಲಿ ಯಕ್ಷಗಾನ ಆಧಾರಿತ ನೃತ್ಯ ರೂಪಕ,ಸಮೂಹ ನೃತ್ಯಗಳು,ಕೋಲಾಟ,ದೊಂದಿ,ಯೋಗಾಸನ,ಕರಾಟೆ,ಗೋಪುರ,ಮಲ್ಲ ಕಂಬ,ಕೂಪಿಕಾ ಸಮತೋಲನ,ತಾಲೀಮು, ಬೆಂಕಿಯಲ್ಲಿ ಸಾಹಸಗಳು, ಸೈಕಲ್ ಸಾಹಸಗಳು,ದೀಪಾರತಿ ಮೊದಲಾದ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ,ಸಂಚಾಲಕ ಭಾಸ್ಕರ ಆಚಾರ್ ಹಿಂದಾರು,ಮುಖ್ಯಶಿಕ್ಷಕಿ ಜಯಮಾಲ ವಿ.ಎನ್,ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕಲ್ಕಾರು, ಶಾಲಾ ನಾಯಕಿ ವಿತಾ ಶ್ರೀ ವಿ.ಗೌಡ ತಿಳಿಸಿದ್ದಾರೆ.

ಸಾಂದೀಪನಿ ಭಿನ್ನ – ವಿಭಿನ್ನ : 2001ರಿಂದ ಪುತ್ತೂರು ತಾಲೂಕಿನ ನರಿಮೊಗರುವಿನಲ್ಲಿ ಕಾರ್ಯಾಚರಿಸುತ್ತಿರುವ ಸಾಂದೀಪನಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಗುಣಮಟ್ಟ ಮತ್ತು ವ್ಯವಸ್ಥಿತ ಕಾರ್ಯನಿರ್ವಹಣೆ ಗಮನಿಸಿ ಸ್ವಿಝರ್ಲ್ಯಾಂಡ್ ಮೂಲದ ಇಂಟರ್ನ್ಯಾಶನಲ್ ಆರ್ಗನೈಸೇಶನ್ ಫಾರ್ ಸ್ಟಾಂಡರ್ಡೈಸೇಶನ್ ಸಂಸ್ಥೆಯು ಐಎಸ್‍ಒ-2015 ಪ್ರಮಾಣಪತ್ರ ನೀಡಿದೆ.ಈ ಮಾನ್ಯತೆ ಪಡೆದ ಜಿಲ್ಲೆಯ 2 ನೇ ಸಂಸ್ಥೆ ಹಾಗೂ ತಾಲೂಕಿನ ಪ್ರಥಮ ಹಾಗೂ ಏಕೈಕ ಸಂಸ್ಥೆ ಇದಾಗಿದೆ. ಶಾಲೆಯಲ್ಲಿ ನೀಡಲಾಗುವ ಶಿಕ್ಷಣದ ಗುಣಮಟ್ಟ, ಆಂತರಿಕ ನಿರ್ವಹಣೆ, ಖರ್ಚುವೆಚ್ಚ ನಿರ್ವಹಣೆ, ದಕ್ಷತೆ ಮತ್ತು ಗುಣಮಟ್ಟ, ಸ್ಥಿರ ಫಲಿತಾಂಶಗಳು, ಅಳತೆ ಮತ್ತು ಮೇಲ್ವಿಚಾರಣೆ, ಶಾಲೆಯಲ್ಲಿ ನಡೆಯುವ ಚಟುವಟಿಕೆಗಳು, ಶಿಸ್ತು, ಸಮಯ ಪಾಲನೆ, ಜಾಗತಿಕವಾಗಿ ಗುರುತಿಸಲ್ಪಟ್ಟ ಮಾನದಂಡ ಇತ್ಯಾದಿ ಮಾನದಂಡಗಳನ್ನು ಮುಂದಿಟ್ಟುಕೊಂಡು ಈ ಮಾನ್ಯತೆ ನೀಡಲಾಗಿದೆ. ಸಂಸ್ಥೆಯಲ್ಲಿ ಪಠ್ಯ ಚಟುವಟಿಕೆ ಅಲ್ಲದೆ ಕ್ರೀಡೆ,ಯೋಗ ಸ್ಪರ್ಧೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಪ್ರತಿಭೆಗಳಿದ್ದಾರೆ.ಅಲ್ಲದೆ ಸಂಸ್ಥೆಯಲ್ಲಿ ಭಾರತೀಯ ಸಂಸ್ಕøತಿಯನ್ನು ಪ್ರಧಾನ ಭೂಮಿಕೆಯಾಗಿಟ್ಟುಕೊಂಡು ಬೋ„ಸಲಾಗುತ್ತದೆ. ಭಗವದ್ಗೀತೆ,ಯೋಗವನ್ನು ಪಠ್ಯ ಕ್ರಮದಲ್ಲಿ ಅಳವಡಿಸಿರುವುದು,ಭರತನಾಟ್ಯ ,ಸಂಗೀತ ಕಲಿಕೆ,ಕರಾಟೆ,ಕೀ ಬೋರ್ಡ್,ಡ್ರಾಯಿಂಗ್ ಪಠ್ಯದಲ್ಲಿ ಸೇರಿದೆ.ಸತ್ಯಸಾಯಿ ಬಾಬಾ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.ಈ ದಿನ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ,ಸಿಬಂದಿಗಳಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಉಡುಗೊರೆ ನೀಡುವ ಸಂಪ್ರದಾಯ ಇದೆ. ಇಲ್ಲಿ ಒಟ್ಟು 1250 ಮಕ್ಕಳಿದ್ದು,ರಾಜ್ಯದ ವಿವಿದೆಡೆಗಳಾದ ಯಾದಗಿರಿ, ಬಾಗಲಕೋಟ,ಜಮಖಂಡಿ, ಹಾಸನ,ಮೈಸೂರು,ಚನ್ನರಾಯಪಟ್ಟಣ,ಬೆಂಗಳೂರು,ಕಾಸರಗೋಡು ,ಬೆಂಗಳೂರು,ಚಿಕ್ಕ ಬಳ್ಳಾಪುರ,ದೊಡ್ಡ ಬಳ್ಳಾಪುರ ಸೇರಿದಂತೆ ಜಿಲ್ಲೆಯ ಪುತ್ತೂರು,ಸುಳ್ಯ,ಮಂಗಳೂರು,ಕಡಬ ತಾಲೂಕಿನಿಂದಲೂ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 37 ಶಿಕ್ಷಕರು,13 ಬಸ್,10 ಜನ ಅಡುಗೆ ಸಿಬಂದಿಗಳಿದ್ದಾರೆ. ಶಿಕ್ಷಕರಿಗೆ,ವಿದ್ಯಾರ್ಥಿಗಳಿಗೆ ಖಾಸಗಿಯಾಗಿ ಆಡಳಿತ ಮಂಡಳಿಯಿಂದ ಮಧ್ಯಾಹ್ನದ ಬೋಜನ,ಶಿಶು ಮಂದಿರದ ವಿದ್ಯಾರ್ಥಿಗಳಿಗೆ ಉಪಹಾರ ಹಾಗೂ ಬೋಜನ ವ್ಯವಸ್ಥೆ ಇದೆ. ಕಡಿಮೆ ಶುಲ್ಕ ಇರುವ ನರಿಮೊಗರು ವಿದ್ಯಾಸಂಸ್ಥೆಯಲ್ಲಿ ಕಲಿತವರಿಗೆ ಉದ್ಯೋಗ ಆಯ್ಕೆ ಸಂದರ್ಭದಲ್ಲಿ ಗ್ರಾಮೀಣ ಕೃಪಾಂಕ ದೊರಕುತ್ತದೆ.