Thursday, May 14, 2026
ಸುದ್ದಿ

ಹೊಸ ವರ್ಷದಂದೇ ಮಲ್ಯಗೆ ಆಘಾತ! ವಶಕ್ಕೆ ಪಡೆದ ಆಸ್ತಿಗಳನ್ನು ಹರಾಜು ಹಾಕ್ಕಲು ಬ್ಯಾಂಕುಗಳಿಗೆ ಕೋರ್ಟ್ ಅನುಮತಿ- ಕಹಳೆ ನ್ಯೂಸ್

ಹೊಸ ವರ್ಷದಂದೇ ಮಲ್ಯಗೆ ಆಘಾತ! ವಶಕ್ಕೆ ಪಡೆದ ಆಸ್ತಿಗಳನ್ನು ಹರಾಜು ಹಾಕ್ಕಲು ಬ್ಯಾಂಕುಗಳಿಗೆ ಕೋರ್ಟ್ ಅನುಮತಿ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಬ್ಯಾಂಕುಗಳಿಗೆ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ವಶಕ್ಕೆ ಪಡೆಯಲಾಗಿರುವ ಆಸ್ತಿಗಳನ್ನು ಹರಾಜು ಹಾಕಲು ಅವಕಾಶ ನೀಡಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೂಲಗಳು ಬುಧವಾರ ತಿಳಿಸಿವೆ.

ಆದರೆ ಈ ತೀರ್ಪು ಜಾರಿಯಾಗುವುದು ಜನವರಿ 18ರನಂತರವಾಗಿದೆ. ಅಲ್ಲಿಯವರೆಗೆ ಇದನ್ನು ತಡೆಹಿಡಿಯಲಾಗಿದ್ದು ಇದನ್ನು ಸಂಬಂಧಿಸಿದ ವಾದಿ, ಪ್ರತಿವಾದಿಗಳು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮೂಲಕ ಪ್ರಶ್ನಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲಗಳ ಪ್ರಕಾರ, ವಶಪಡಿಸಿಕೊಂಡ ಸ್ವತ್ತುಗಳು ಮುಖ್ಯವಾಗಿ ಷೇರುಗಳಂತಹ ಹಣಕಾಸು ಭದ್ರತೆ ಕುರಿತ ದಾಖಲೆಗಳನ್ನು ಒಳಗೊಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ಹರಾಜು ಹಾಕಲು ಯಾವುದೇ ಆಕ್ಷೇಪವಿಲ್ಲ ಎಂದು ಕಳೆದ ವರ್ಷ ಫೆಬ್ರವರಿಯಲ್ಲಿ ಇಡಿ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ತಿಳಿಸಿತ್ತು. ಸಾಲದಾತರು 6,203.35 ಕೋಟಿ ರೂ. ಮತ್ತು 2013 ರಿಂದ ಪಾವತಿಸಬೇಕಾದ ವಾರ್ಷಿಕ ಶೇಕಡಾ 11.5 ರ ಬಡ್ಡಿಯೊಂದಿಗೆ ಆಸ್ತಿಗಳನ್ನು ಹರಾಜು ಹಾಕಲಿದ್ದಾರೆ.

ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಕಳೆದ ವರ್ಷ ಜನವರಿ 5 ರಂದು ಮಲ್ಯ ಅವರನ್ನು ದೇಶಭ್ರಷ್ಠಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶಿಸಿತ್ತು. ಮಲ್ಯ ಮಾರ್ಚ್ 2016 ರಲ್ಲಿ ದೇಶದಿಂದ ಪಲಾಯನ ಮಾಡಿದ್ದರು ಮತ್ತು ಅಂದಿನಿಂದ ಯುನೈಟೆಡ್ ಕಿಂಗ್‌ಡಂನಲ್ಲಿ ವಾಸಿಸುತ್ತಿದ್ದಾರೆ.