
ಹೊಸ ವರ್ಷದ ಸಂಭ್ರಮವನ್ನು ಬರಮಾಡಿಕೊಳ್ಳಬೇಕಿದ್ದವರು ಸಾವಿನ ಮನೆಯ ಕದ ತಟ್ಟಿದ್ದಾರೆ.ಮಧ್ಯಪ್ರದೇಶದ ಉದ್ಯಮಿ ಪುನೀತ್ ಅಗರವಾಲ್ ಮನೆಯಲ್ಲಿ ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಪಾರ್ಟಿ ಆಯೋಜಿಸಲಾಗಿತ್ತು. ಅದಕ್ಕಾಗಿ ಗೆಳೆಯರನ್ನು, ಕುಟುಂಬದವರನ್ನು ಆಹ್ವಾನಿಸಿದ್ದರು.
ಈ ವೇಳೆ ಪಾರ್ಟಿಗೆ ಬಂದವರು ಲಿಫ್ಟ್ನಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಲಿಫ್ಟ್ ಕುಸಿದ ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ. ಘಟನೆ ನಡೆದ ಕೂಡಲೆ ಆಯಂಬುಲೆನ್ಸ್ಗೆ ಕರೆ ಮಾಡಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದರೂ 6 ಜನ ಕೊನೆಯುಸಿರೆಳೆದಿದ್ದಾರೆ.
ಲಿಫ್ಟ್ನ ಬೆಲ್ಟ್ ತುಂಡಾಗಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ಅವಘಡದಲ್ಲಿ ಸಾವನ್ನಪ್ಪಿದವರೆಲ್ಲರೂ ಅಗರವಾಲ್ ಅವರ ಸಂಬಂಧಿಕರು ಮತ್ತು ಗೆಳೆಯರು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಧರ್ಮರಾಜ್ ಮೀನಾ ತಿಳಿಸಿದ್ದಾರೆ.









