Saturday, May 9, 2026
ಸುದ್ದಿ

ಈ ವರ್ಷ ಇಷ್ಟೊಂದು ಏರಿಕೆಯಾಯ್ತು ʼಪೆಟ್ರೋಲ್ʼ ಬೆಲೆ -ಕಹಳೆ ನ್ಯೂಸ್

ಕಚ್ಚಾ ತೈಲ ಬೆಲೆಯಲ್ಲಾದ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಾದ ಕುಸಿತದಿಂದಾಗಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ವರದಿ ಪ್ರಕಾರ 2019 ರಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 6 ರೂಪಾಯಿ 3 ಪೈಸೆ ಹೆಚ್ಚಾಗಿದೆ. ಇನ್ನು ಡಿಸೇಲ್ ಬೆಲೆ ಒಂದು ಲೀಟರ್ ಗೆ ಐದು ರೂಪಾಯಿ ಒಂದು ಪೈಸೆ ಹೆಚ್ಚಾಗಿದೆ.

ವರ್ಷದ ಕೊನೆ ದಿನ ಅಂದ್ರೆ ಇಂದು ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 10 ಪೈಸೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಇಂದು ಲೀಟರ್ ಪೆಟ್ರೋಲ್ 75.14 ರೂಪಾಯಿಗೆ ಮಾರಾಟವಾಗ್ತಿದೆ. ಡಿಸೇಲ್ 18 ಪೈಸೆ ಏರಿಕೆ ಕಂಡಿದ್ದು, ದೆಹಲಿಯಲ್ಲಿ ಇಂದು ಲೀಟರ್ ಡಿಸೇಲ್ ಬೆಲೆ 67.96 ರೂಪಾಯಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಪೆಟ್ರೋಲ್ 10 ಪೈಸೆ ಏರಿಕೆ ಕಂಡಿದ್ದು, ಲೀಟರ್ ಪೆಟ್ರೋಲ್ ಬೆಲೆ 77.71 ರೂಪಾಯಿಯಾಗಿದೆ. ಡಿಸೇಲ್ ಬೆಲೆ 19 ಪೈಸೆ ಹೆಚ್ಚಳವಾಗಿದ್ದು, ಲೀಟರ್ ಡಿಸೇಲ್ ಬೆಲೆ 70.28 ರೂಪಾಯಿಯಾಗಿದೆ.

ಕಚ್ಚಾ ತೈಲ ಬೆಲೆ ಶೇಕಡಾ 36 ರಷ್ಟು ಹೆಚ್ಚಾಗಿದೆ. ಕಚ್ಚಾ ತೈಲ ರಫ್ತು ಮಾಡುವ ದೇಶಗಳು ಮುಂದಿನ ವರ್ಷ ಉತ್ಪಾದನೆ ಕಡಿಮೆ ಮಾಡುವ ಸಾಧ್ಯತೆಯಿದ್ದು, ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.