Sunday, June 14, 2026
ಸುದ್ದಿ

ರಾಜ್ಯದ ‘ದೂರ ಶಿಕ್ಷಣ’ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ದೂರ ಶಿಕ್ಷಣ ಕೋರ್ಸ್ ಗೆ ‘KSOUಗೆ ಮಾತ್ರವೇ ಅವಕಾಶ’-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಿಂದ ಈಗಾಗಲೇ ದೂರ ಶಿಕ್ಷಣ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇದೇ ಕಾರಣದಿಂದಾಗಿ ರಾಜ್ಯದಲ್ಲಿರುವ ಏಕೈಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳ ಸೇರ್ಪಡೆಯೇ ಕಡಿಮೆ ಆಗಿದೆ. ಹೀಗಾಗಿ ಕೆ ಎಸ್ ಒ ಯು ಹೊರತಾಗಿ ಬೇರೆ ವಿವಿಗಳು ದೂರ ಶಿಕ್ಷಣ ನೀಡಬಾರದೆಂದು ನಿರ್ಧರಿಸಲಾಗಿದೆ. ಈ ಮೂಲಕ ದೂರ ಶಿಕ್ಷಣೆ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದೆ.

ಜಾಹೀರಾತು

ರಾಜ್ಯದಲ್ಲಿರುವ ಕುವೆಂಪು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಧಾರವಾಡ ಹಾಗೂ ಕರ್ನಾಟಕ ವಿವಿ ಸೇರಿದಂತೆ ಅನೇಕ ವಿವಿಗಳಿಂದ ದೂರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಆದ್ರೇ ಇದು ಸರಿಯಾದ ಕ್ರಮವಲ್ಲ. ರಾಜ್ಯದ ಏಕೈಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇರುವಾಗ ಬೇರೆ ವಿವಿಗಳೂ ನೀಡುವುದು ಎಷ್ಟು ಸರಿ ಎಂಬ ಚರ್ಚೆ ಇದೀಗ ಉದ್ಬವವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ(ಕೆ ಎಸ್ ಎಚ್ ಇ ಸಿ) ಸಾಮಾನ್ಯ ಸಭೆಯಲ್ಲಿ ಮೈಸೂರಿನಲ್ಲಿ ಇರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ( ಕೆ ಎಸ್ ಒ ಯು) ಮಾತ್ರ ಇನ್ನು ಮುಂದೆ ದೂರ ಶಿಕ್ಷಣ ನೀಡಬೇಕು. ಉಳಿದ ಯಾವ ವಿವಿಗಳೂ ದೂರ ಶಿಕ್ಷಣ ನೀಡುವಂತಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಸದ್ಯದಲ್ಲಿಯೇ ರಾಜ್ಯದ ಇತರೆ ವಿವಿಗಳಲ್ಲಿ ದೂರ ಶಿಕ್ಷಣ ಕೋರ್ಸ್ ನಿಲುಗಡೆ ಆಗುತ್ತಾ ಎಂಬ ಆತಂಕಕ್ಕೂ ಎಡೆ ಮಾಡಿಕೊಟ್ಟಿದೆ.

ಆದ್ರೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹೊರತಾಗಿ ಇತರೆ ವಿಶ್ವವಿದ್ಯಾಲಯಗಳು ಮುಂದಿನ 3ರಿಂದ 5 ವರ್ಷಗಳವರೆಗೆ ದೂರ ಶಿಕ್ಷಣ ನೀಡಲು ಯುಜಿಸಿಯಿಂದ ಅನುಮತಿ ಪಡೆದಿದ್ದು, ಇದು ಸದ್ಯಕ್ಕೆ ಜಾರಿಗೆ ಬರೋದು ಅನುಮಾನವಾಗಿದೆ. ಆದರೂ ಮುಂದೊಂದು ದಿನ ಜಾರಿಗೆ ಬಂದರೂ ಬರಬಹುದಾಗಿದೆ. ಹೀಗಾಗಿ ದೂರ ಶಿಕ್ಷಣ ವ್ಯಾಸಂಗ ಮಾಡಲು ಕೆ ಎಸ್ ಒ ಯು ಗೆ ವಿದ್ಯಾರ್ಥಿಗಳು ಹೋಗಬೇಕಾಗುತ್ತದೆ.