Sunday, June 14, 2026
ಸುದ್ದಿ

ರೈತರೇ ನಿಮ್ಮ ‘ಬೋರ್ ನೀರು ಕಡಿಮೆ ಆಗಿ ಸುಟ್ಟೋ ಹೋಗ್ತಾ’ ಇದ್ಯಾ.? ಈ ಸಾಧನ ಅಳಡಿಸಿ, ಪರಿಣಾಮ ನೋಡಿ-ಕಹಳೆ ನ್ಯೂಸ್

ಸ್ಪೆಷಲ್ ಡೆಸ್ಕ್ : ಸದ್ಯದಲ್ಲಿಯೇ ಚಳಿಗಾಲ ಮುಗಿದು, ಬೇಸಿಗೆ ಕಾಲ ಶುರುವಾಗುತ್ತಿದೆ. ಬೇಸಿಗೆ ಕಾಲ ಶುರುವಾಯ್ತು ಅಂದ್ರೇ ಸಾಕು ರೈತರಿಗೆ ಒಂದೇ ಸಮಸ್ಯೆ, ಬೋರ್ ನಲ್ಲಿ ನೀರು ಕಡಿಮೆಯಾಗಿ, ಪಂಪ್ ಸೆಟ್ ಸುಟ್ಟು ಹೋಗುವಂತ ಪರಿಸ್ಥಿತಿ ಎದುರಿಸಬೇಕಾಗೋದು. ಇದೀಗ ಇಂತಹ ಸಮಸ್ಯೆಗೆ ಪರಿಹಾರ ದೊರೆತಿದ್ದು. ಹಿರಿಯ ವಿಜ್ಞಾನಿಯೊಬ್ಬರು ಎಲೆಕ್ಟ್ರಾನಿಕ್ ಸನ್ಸರ್ ಒಂದನ್ನು ಕಂಡು ಹಿಡಿದಿದ್ದು, ಈ ಸಾಧನವನ್ನು ಬೋರ್ ವೆಲ್ ನಲ್ಲಿ ಅಳವಡಿಸಿದ್ರೇ, ಕ್ಷಣ ಕ್ಷಣದ ಮಾಹಿತಿ ನಿಮಗೆ ಲಭ್ಯ. ಬೋರ್ ನಲ್ಲಿ ನೀರು ಕಡಿಮೆ ಆದ್ರೇ ಆಟೋ ಮ್ಯಾಟಿಕ್ ಬೋರ್ ಆಫ್.

ಜಾಹೀರಾತು

ಹೌದು… ಹೀಗೆ ರೈತರ ಬೋರ್ ನಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಈ ಸಾಧನವನ್ನು ಬೋರ್ ನಲ್ಲಿ ಅಳವಡಿಸಿಕೊಳ್ಳುವುದರಿಂದ ಆಫ್ ಆಗುತ್ತದೆ. ಈ ಮೂಲಕ ಬೋರ್ ನಲ್ಲಿ ನೀರು ಕಡಿಮೆಯಾದರೂ ಸುಮ್ಮನೇ ಮೋಟರ್ ಓಡಿ ಬೋರ್ ಸುಟ್ಟು ಹೋಗುವುದನ್ನು ತಪ್ಪಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಾಧನವನ್ನು ಕಂಡುಹಿಡಿದಿರುವವರೇ ಹಿರಿಯ ವಿಜ್ಞಾನಿ ವಿ ಎಸ್ ಪ್ರಕಾಶ್ ಎಂಬುವಂತವರು. ಎಲೆಕ್ಟ್ರಾನಿಕ್ ಸೆನ್ಸರ್ ಅನ್ನು ಕೇಬಲ್ ಮೂಲಕ ಬೋರ್ ಒಳಗೆ ಬಿಟ್ಟರೇ.. ಪ್ರತಿ ಹತ್ತು ಸೆಕೆಂಡ್ ಗೆ ನಿಮಗೆ ನಿಮ್ಮ ಬೋರ್ ನಲ್ಲಿ ನೀರು ಎಷ್ಟು ಇದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಈ ಸೆನ್ಸಾರ್ ಕಂಪ್ಯೂಟರ್ ಗೆ ಅಳವಡಿಸಿದರೇ, ಕಂಪ್ಯೂಟರ್ ನ ಪರದೆಯ ಮೂಲಕ ಬೋರ್ ವೆಲ್ ನಲ್ಲಿನ ನೀರಿನ ಮಟ್ಟವನ್ನು ತಿಳಿಯಬಹುದಾಗಿದೆ.

‘ಎಲೆಕ್ಟ್ರಾನಿಕ್ ಸೆನ್ಸರ್’ ಕಂಡು ಹಿಡಿದ ಹಿಂದಿನ ಕತೆ ಏನ್ ಗೊತ್ತಾ.?

ರಾಜ್ಯಕ್ಕೆ ಭೇಟಿ ನೀಡಿದ್ದ ಜರ್ಮನಿ ವಿಜ್ಞಾನಿಗಳು ಹಾಳು ಬಿದ್ದಿದ್ದಂತ ಅನೇಕ ಬೋರ್ ವೆಲ್ ಕಂಡು ಅಂತರ್ಜಲ ಮಟ್ಟವನ್ನು ತಿಳಿಯುವುದು ನಿಮಗೆ ಗೊತ್ತಿಲ್ಲವೇ..? ಅಂತರ್ಜಲ ಮಟ್ಟವನ್ನು ತಿಳಿಯದೇ ಹೀಗೆ ಬೋರ್ ವೆಲ್ ಗಳು ಹಾಳು ಬಿದ್ದಿದ್ದಾವೆಯೇ ಎಂದು ಗೇಲಿ ಮಾಡಿದ್ದರಂತೆ. ಇಂತಹ ಗೇಲಿಯನ್ನೇ ಛಾಲೆಂಜ್ ಆಗಿ ಸ್ವೀಕರಿಸಿದ ಹಿರಿಯ ವಿಜ್ಞಾನಿ ವಿ ಎಸ್ ಪ್ರಕಾಶ್, ಸತತ ಪರಿಶ್ರಮದ ಮೂಲಕ ಎಲೆಕ್ಟ್ರಾನಿಕ್ ಸೆನ್ಸರ್ ಕಂಡು ಹಿಡಿದಿದ್ದಾರೆ.

ಈಗಾಗಲೇ ಪ್ರಾಯೋಗಿಕವಾಗಿ ತಮ್ಮ ಮನೆಯ ಬೋರ್ ಗೆ ಅಳವಡಿಸಿಕೊಂಡಿರುವ ಅವರು ಬೋರ್ ವೆಲ್ ನಲ್ಲಿ ನೀರಿನ ಮಟ್ಟ ಎಷ್ಟು ಇದೆ ಎಂಬುದನ್ನು ಕಂಪ್ಯೂಟರ್ ಪರದೆ ಮೂಲಕ ಪ್ರತಿ ಹತ್ತು ಸೆಕೆಂಡ್ ಗೆ ಒಮ್ಮೆ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಇದೇ ಎಲೆಕ್ಟ್ರಾನಿಕ್ ಸೆನ್ಸರ್ ಅನ್ನು ರಾಜ್ಯದ ಚಿಕ್ಕಬಳ್ಳಾಪರು, ಕೋಲಾರ, ಬಳ್ಳಾರಿ ಸೇರಿದಂತೆ ವಿವಿಧ ರೈತರ ಪಂಪ್ ಸೆಟ್ ಗಳಿಗೆ ಅಳವಡಿಸಿ, ಯಶಸ್ವಿ ಕೂಡ ಆಗಿದ್ದಾರೆ.

ಎಲೆಕ್ಟ್ರಾನಿಕ್ ಸೆನ್ಸರ್ ಖರೀದಿಗೆ ಎಷ್ಟು ಹಣ.?

ಒಮ್ಮೆ ಬೋರ್ ನಲ್ಲಿ ನೀರು ಕಡಿಮೆಯಾಗಿ ಬೋರ್ ಸುಟ್ಟು ಹೋದ್ರೆ, ರೈತರು ಬೋರ್ ವೈಂಡಿಂಗ್ ಮಾಡಿಸೋಕೆ. ಬೋರ್ ನಿಂದ ಮೇಲೆ ಪಂಪ್ ಸೆಟ್ ಎತ್ತೋಕೆ ಸೇರಿ 10-20 ಸಾವಿರದ ವರೆಗೆ ಖರ್ಚು ಮಾಡಬೇಕಾಗುತ್ತಿದೆ. ಹೀಗೆ ಆದಾಗ ಹಣವೂ ಪೋಲ್, ಶ್ರಮವೂ ಪೋಲ್ ಆಗಿ ಬಿಡುತ್ತದೆ.

ಸೋ ಇಂತಹ ಸಮಸ್ಯೆ ನಿವಾರಿಸಿಕೊಳ್ಳುವ ಸಲುವಾಗಿ ಹಿರಿಯ ವಿಜ್ಞಾನಿ ವಿ ಎಸ್ ಪ್ರಕಾಶ್ ಕಂಡು ಹಿಡಿದಿರುವ ಎಲೆಕ್ಟ್ರಾನಿಕ್ ಸೆನ್ಸರ್ ಬೋರ್ ವೆಲ್ ಗೆ ಅಳವಡಿಸಿದರೇ, ಪ್ರತಿ 10 ಸೆಕೆಂಟ್ ಅಂತರ್ಜಲ ಮಟ್ಟವನ್ನು ರೈತರು ಪಡೆಯಬಹುದಾಗಿದೆ. ಅಲ್ಲದೇ ಬೋರ್ ನಲ್ಲಿ ನೀರು ಕಡಿಮೆಯಾದ್ರೇ, ಈ ಸಾಧನದಿಂದಾಗಿ ಪಂಪ್ ಸೆಟ್ ಆಟೋ ಮ್ಯಾಟಿಕ್ ಆಗಿ ಆಫ್ ಆಗುತ್ತದೆ. ಈ ಮೂಲಕ ಬೋರ್ ನಲ್ಲಿ ನೀರು ಇಲ್ಲದೇ ಇದ್ದರೂ ಪಂಪ್ ಸೆಟ್ ರನ್ ಆಗಿ ಸುಟ್ಟು ಹೋಗುವ ಸಮಸ್ಯೆಗೆ ಬ್ರೇಕ್ ಹಾಕಲಿದೆ.

ಇಂತಹ ಸಾಧನವನ್ನು ರೂ.15,000ಕ್ಕೆ ಲಭ್ಯವಿದ್ದು. ಈ ಎಲೆಕ್ಟ್ರಾನಿಕ್ ಸೆನ್ಸರ್ ಖರೀದಿಸಿ, ನಿಮ್ಮ ಬೋರ್ ವೆಲ್ ಗೆ ಅಳವಡಿಸಿಕೊಂಡ್ರೇ, ರೈತರಿಗೆ ಬೋರ್ ವೆಲ್ ಸುಟ್ಟು ಹೋಗಿ ಆಗುವಂತ ರಿಪೇರಿಯ ನಷ್ಟ, ಸಮಸ್ಯೆಗೆ ಇತಿಶ್ರೀ ಬೀಳಲಿದೆ. ಈ ಮೂಲಕ ರೈತರಿಗೆ ಸಿಹಿಸುದ್ದಿ ಈ ಎಲೆಕ್ಟ್ರಾನಿಕ್ ಸೆನ್ಸರ್ ಅಳವಡಿಕೆಯಿಂದ ಸಿಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಈ ಎಲೆಕ್ಟ್ರಾನಿಕ್ ಸೆನ್ಸರ್ ಖರೀದಿಗಾಗಿ ಹಿರಿಯ ವಿಜ್ಞಾನಿ ವಿ ಎಸ್ ಪ್ರಕಾಶ್ ದೂರವಾಣಿ ಸಂಖ್ಯೆ – 97407 77700 ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.