Friday, May 15, 2026
ಸುದ್ದಿ

Breaking News : ಶಿರಾಡಿಘಟಿ ಬಂದ್ ; ಮಗುಚಿಬಿದ್ದ ಟ್ಯಾಂಕರ್ – ಟ್ರಾಫಿಕ್ ಜಾಮ್ – ಪರದಾಡುತ್ತಿರುವ ಪ್ರಯಾಣಿಕರು – ಸರತಿಸಾಲಿನಲ್ಲಿ ನಿಂತ ವಾಹನ – ಕಹಳೆ ನ್ಯೂಸ್

ಸಕಲೇಶಪುರ : ಶಿರಾಡಿ ಘಾಟ್ ರಸ್ತೆಯಲ್ಲಿ ದೋಣಿಗಲ್ಲು ಎಂಬಲ್ಲಿ ರಾಷ್ಟ್ರಿಯ ಹೆದ್ದಾರಿ 75 ರಲ್ಲಿ ನ. 30 ರಂದು ಟ್ಯಾಂಕರ್ ಒಂದು ಮಗುಚಿ ಬಿದ್ದಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗಿದೆ. ವಾಹನ ಚಾಲಕರ ಹಾಗೂ ಪ್ರಯಾಣಿಕರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಾಹ್ನ ಸುಮಾರು 2 ಗಂಟೆಗೆ ಮಗುಚಿ ಬಿದ್ದ ಟ್ಯಾಂಕರ್, ಸರತಿ ಸಾಲಿನಲ್ಲಿ ನಿಂತ ವಾಹನಗಳು,
ಬಸ್ ಹಾಗು ಇನ್ನಿತರ ವಾಹನಗಳಲ್ಲಿ ಸಂಚರಿಸುವ ವೃದ್ದರು , ಮಹಿಳೆಯಾರು ಮಕ್ಕಳು, ಮಧ್ಯಾಹ್ನದಿಂದ ವಾಹನದಲ್ಲೇ ಕಾದು ಕಾದು ಕುಡಿಯಲು ನೀರಿಲ್ಲದೆ ಊಟ ಇಲ್ಲದೆ, ಬಹಿರ್ದೆಶೆಗೆ ಹೋಗಲು ಸ್ಥಳವಿಲ್ಲದೆ ತೀರಾ ಸಮಸ್ಯೆ ಗೊಳಗಾಗಿದ್ದರೆ,
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸರಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿಜ್ಞೇಶ್ವರ ಭಟ್ ಎಂಬವರು ಮಾದ್ಯಮಕ್ಕೆ ಮಾಹಿತಿ ನೀಡಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಸಕ್ಲೇಶಪುರ ಪೊಲೀಸ್ ಅಧಿಕಾರಿಗಳು ಹಾಗು ಕ್ರೈನ್ ಸಿಬಂಧಿಗಳು ತೆರವು ಕಾರ್ಯ ನಡೆಸುತ್ತಿದ್ದಾರೆ.