Recent Posts

Saturday, May 9, 2026
ರಾಜಕೀಯ

ಹುಲಿಗಳ ಜಯಂತಿಯಾಗಿದ್ದಕ್ಕೆ ಸಿಎಂಗೆ ಹೆದರಿಕೆ, ಜಯಂತಿ ಆಚರಿಸಿಯೇ ಸಿದ್ಧ – ಟಿಪ್ಪು ವೇದಿಕೆ ಅಧ್ಯಕ್ಷ – ಕಹಳೆ ನ್ಯೂಸ್

ಚಿತ್ರದುರ್ಗ: ಸೂರ್ಯ ಚಂದ್ರ ಇರುವವರೆಗೆ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ರಾಜ್ಯ ಟಿಪ್ಪು ಸುಲ್ತಾನ್ ವೇದಿಕೆ ಅಧ್ಯಕ್ಷ ಖಾಸಿಂ ಅಲಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೂರ್ಯ ಚಂದ್ರ ಇರುವ ತನಕ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ. ಇದು ಹುಲಿಗಳ ಜಯಂತಿ ಅದಕ್ಕೆ ಯಡಿಯೂರಪ್ಪನವರಿಗೆ ಹೆದರಿಕೆ. ಬಿಎಸ್‍ವೈ ಅವರಂತಹ 100 ಕೋಟಿ ನಾಯಕರು ಬಂದರೂ ಟಿಪ್ಪು ಜಯಂತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಟಿಪ್ಪು ಜಯಂತಿ ಹಾಗೂ ಪಠ್ಯ ತೆಗೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಯಡಿಯೂರಪ್ಪನವರಿಗೆ ಟಿಪ್ಪು ಸುಲ್ತಾನ್ ಇತಿಹಾಸ ಗೊತ್ತಿಲ್ಲ. ಯಡಿಯೂರಪ್ಪ ಒಬ್ಬ ಭ್ರಷ್ಟ ರಾಜಕಾರಣಿ. ಟಿಪ್ಪು, ರಾಮ ಮಂದಿರ, ಪುಲ್ವಾಮಾ ದಾಳಿ, ಹಿಂದೂ, ಮುಸ್ಲಿಂ, ಪಾಕಿಸ್ತಾನ ಎಂಬ ಅಜೆಂಡಾ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ಶೇ.80ರಷ್ಟು ಸ್ವಾಮೀಜಿಗಳು ಟಿಪ್ಪುವನ್ನು ಒಪ್ಪಿಕೊಂಡಿದ್ದಾರೆ ಎಂದರು.

ಟಿಪ್ಪು ಜಯಂತಿ ಆಚರಣೆಗೆ ಶೇ.90ರಷ್ಟು ಹಿಂದೂಗಳ ಸಹಕಾರವಿದೆ. ಬಿಜೆಪಿಯವರು ಹಣ ಮಾಡಲು ಅಧಿಕಾರಕ್ಕೆ ಬರುತ್ತಾರೆ. ಹಿಂದೂ ಮುಸ್ಲಿಮರ ಮಧ್ಯೆ ಜಗಳ ಹಚ್ಚುವುದೇ ಬಿಜೆಪಿಯವರ ಅಜೆಂಡಾ ಎಂದು ಕಿಡಿಕಾರಿದರು.