Recent Posts

Saturday, May 9, 2026
ರಾಜಕೀಯ

ಇಂದಿನಿಂದ ಎರಡು ದಿನಗಳ ಕಾಲ ಸೌದಿ ಅರೇಬಿಯಾ ಪ್ರವಾಸ ಕೈಗೊಂಡ ಪ್ರಧಾನಿ ನಮೋ – ಕಹಳೆ ನ್ಯೂಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಇಂದಿನಿಂದ ಎರಡು ದಿನಗಳ ಕಾಲ ಸೌದಿ ಅರೇಬಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಆರ್ಥಿಕ ಮತ್ತು ಇಂಧನ ಸಂಬಂಧಿಸಿದಂತೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ನರೇಂದ್ರ ಮೋದಿ ಈ ಪ್ರವಾಸ ಕೈಗೊಂಡಿದ್ದಾರೆ.

ಸೌದಿ ಅರೇಬಿಯಾ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಆಹ್ವಾನದ ಮೇರೆಗೆ ನರೇಂದ್ರ ಮೋದಿ ಗಲ್ಫ್ ಪ್ರವಾಸ ಕೈಗೊಳ್ಳಲಿದ್ದಾರೆ.
ಎರಡು ದಿನಗಳ ಭೇಟಿ ವೇಳೆ, ಕೆಲವು ದ್ವಿಪಕ್ಷೀಯ ಮಾತುಕತೆಗಳ ಜೊತೆ ರೂಪೇ ಕಾರ್ಡ್ ಅನ್ನು ಮೋದಿ ಬಿಡುಗಡೆಗೊಳಿಸಲಿದ್ದಾರೆ. ರಿಯಾದ್‍ನಲ್ಲಿ ಭವಿಷ್ಯದ ಹೂಡಿಕೆಯ ಉಪಕ್ರಮದ ಬಗ್ಗೆ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು