
ಕಡಬ : ಯುವಬ್ರಿಗೇಡ್ ಕಡಬ ವತಿಯಿಂದ 13ನೇ ವಾರದ ಸ್ವಚ್ಚತಾ ಕಾರ್ಯಕ್ರಮ ಇಂದು ಮರ್ಧಾಳದಲ್ಲಿ ನಡೆಯಿತು.
ಮರ್ಧಾಳ ಪೇಟೆ ಸ್ವಚ್ಚತಾ ಕಾರ್ಯ ಮಾಡುವುದರ ಜೊತೆಗೆ ವರ್ತಕರು ಹಾಗೂ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯ ನಡೆಯಿತು. ಕಾರ್ಯದಲ್ಲಿ ಹಲವಾರು ಯುವಬ್ರಿಗೇಡ್ ಕಾರ್ಯಕರ್ತರು ಭಾಗವಹಿಸಿದರು.












