Recent Posts

Saturday, May 9, 2026
ಸುದ್ದಿ

ಜಾಕೀರ್ ಹುಸೇನ್ ಹಸ್ತಾಂತರಕ್ಕೆ ಮಲೇಷ್ಯಾ ಸರ್ಕಾರಕ್ಕೆ ಮನವಿ – ಕಹಳೆ ನ್ಯೂಸ್

ವಿದೇಶಕ್ಕೆ ಪರಾರಿಯಾಗಿರುವ ಪ್ರಚೋದನಕಾರಿ ಭಾಷಣಕಾರ ಜಾಕೀರ್ ಹುಸೇನ್ ಗಡಿಪಾರಿಗೆ ಭಾರತ ಸರ್ಕಾರ ಮಲೇಷ್ಯಾ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಷ್ಯಾದ ಮಾಸ್ಕೊದ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅಲ್ಲಿ ಮಲೇಷ್ಯಾ ಪ್ರಧಾನಿ ಮೆಹೇತಿರ್ ಮೊಹಮ್ಮದ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಾಕೀರ್ ಹುಸೇನ್ ಪ್ರಕರಣವನ್ನು ಮುಂದಿಟ್ಟಿದೆ.

ಭಯೋತ್ಪಾದನೆ, ಅಕ್ರಮ ವಿದೇಶಿ ಹಣ ವರ್ಗಾವಣೆ, ವಿವಿಧ ಪ್ರಕರಣಗಳಲ್ಲಿ ಭಾರತ ಸರ್ಕಾರಕ್ಕೆ ಬೇಕಾದ ಪ್ರಮುಖ ಆರೋಪಿಯಾಗಿದ್ದಾನೆ. ಈ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸ್ಪಷ್ಟ ಪಡಿಸಿದ್ದಾರೆ.