Recent Posts

Saturday, May 9, 2026
ಸುದ್ದಿ

ಮಂಗಳೂರು ಇಂಟರ್ ನ್ಯಾಶನಲ್ ಲಾಡ್ಜ್ ನಲ್ಲಿ ಜುಗಾರಿ ಆಟ; ಎಂಟು ಮಂದಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು ನಗರದ ಬೆಂದೂರ್‍ವೆಲ್ ಕುಮಾರ್ ಇಂಟರ್ ನ್ಯಾಶನಲ್ ಲಾಡ್ಜ್‍ನಲ್ಲಿ ಜುಗಾರಿ ಆಟ ನಿರತರಾಗಿದ್ದ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಾಡ್ಜ್ ನಲ್ಲಿ ಜುಗಾರಿ ಆಟ ನಿರತರಾಗಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪ್ರವೀಣ್, ನವೀನ್, ನವೀನ್, ಬಶೀರ್, ಸತೀಶ, ಆಕಾಶ್, ಭಾಸ್ಕರ, ವಿಜಯ ಕುಮಾರ್ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 49,340 ನಗದು, ಬೊಲೆನೊ ಕಾರು-1, ದ್ವಿ ಚಕ್ರ ವಾಹನ-3 ಹಾಗೂ 10 ಮೊಬೈಲ್ ಪೋನ್ ಹಾಗೂ ಜುಗಾರಿ ಆಟ ಆಡಲು ಉಪಯೋಗಿಸಿದ ವಸ್ತುಗಳನ್ನು ವಶ ಪಡಿಸಿಕೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು