Recent Posts

Saturday, May 9, 2026
ಸುದ್ದಿ

ವಿವೇಕಾನಂದ ವಿದ್ಯಾವರ್ಧಕ ಸಂಘದ 38ನೇ ವರ್ಷದ ಗಣೇಶೋತ್ಸವ – ಕಹಳೆ ನ್ಯೂಸ್

ಪುತ್ತೂರು: ಸಮಾಜವು ಇಂದು ಅಶಾಂತಿಯಿಂದ ಕೂಡಿದೆ. ಇದರ ನಿವಾರಣೆಗೆ ಗಣಪತಿ ದೇವರ ಆರಾಧನೆ ಮುಖ್ಯ. ಮತಭೇದವಿಲ್ಲದೆ ಸಂಸ್ಕಾರ, ಸಂಸ್ಕೃತಿಗೆ ಗಣೇಶ ಆರಾಧನೆಯು ಪೂರಕ. ಪಠ್ಯ ಪುಸ್ತಕಗಳು ಕೇವಲ ಅಂಕಕ್ಕೆ ಸೀಮಿತವಾಗದೇ ಮಾನವೀಯ ಮೌಲ್ಯಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಸಾದ್ವಿ ಶ್ರೀ ಮಾತಾನಂದಮಯೀ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯುತ್ತಿರುವ 38ನೇ ವರ್ಷದ ಗಣೇಶೋತ್ಸವದ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಮಂಗಳವಾರ ಆಶೀರ್ವಚನ ನೀಡಿದರು.
ಉತ್ತಮ ಮೌಲ್ಯಗಳಿಂದ ವಿದ್ಯಾರ್ಥಿಗಳ ಜೀವನವು ಸಮರ್ಪಕವಾಗಲು ಸಾಧ್ಯ. ವಿದ್ಯೆ ಇದೆ ಎಂದು ಗರ್ವ ಪಡಬಾರದು. ಪೂರ್ವತ್ತಾಪ ಪಶ್ವಾತ್ತಾಪ ಇವೆರಡನ್ನೂ ಜೀವನದಲ್ಲಿ ಅಳವಡಿಸಿಕೊಂಡಾಗ ಶ್ರೇಷ್ಠತೆ ಸಾಧಿಸುತ್ತೇವೆ. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಚಿಂತನೆ ಅಗತ್ಯ. ಆಗ ವ್ಯಕ್ತಿತ್ವ ವಿಕಸನ ಹೊಂದಲು ಸಾಧ್ಯ ಎಂದು ಹೇಳಿದರು.

ಮಾನ ಹೋದರೆ ಮತ್ತೆ ಬಾರದು, ಜ್ಞಾನ ಬಂದರೆ ಮತ್ತೇ ಹೋಗದು ಎಂಬ ಮಾತಿದೆ. ಉತ್ತಮ ವಿಚಾರಗಳನ್ನು ಮೈ ಗೂಡಿಸಿಕೊಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಸಾಧನೆಗೆ ಆಸೆ ಅಡ್ಡಿಯಾಗಬಾರದು. ಬೇಕು ಬೇಡಗಳನ್ನು ಆತ್ಮಾವಲೋಕ ಮಾಡಿ ಮುನ್ನಡೆಯುವುದು ಮುಖ್ಯ. ಅಜ್ಞಾನವನ್ನು ಮೆಟ್ಟಿ ನಿಂತು ಜ್ಞಾನವಂತರಾಗಬೇಕು. ಸತ್ಯ ಧರ್ಮ ನಮ್ಮ ಜೀವನದ ಪ್ರಮುಖ ಅಂಗಗಳಾಗಬೇಕು. ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಸಾರಥಿಗಳಾಗಬೇಕು ಮತ್ತು ಸಮಾಜಕ್ಕೆ ವಿದ್ಯಾರ್ಥಿಗಳು ಸಾಧನೆ ಮಾಡುವುದರ ಮೂಲಕ ಮಾದರಿಯಾಗುವುದು ಮುಖ್ಯ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ವಿಭಾಗದ ಪೊಲೀಸ್ ಕಮಿಷನರ್ ಡಾ.ಪಿ. ಎಸ್. ಹರ್ಷ ಮಾತನಾಡಿ, ಭಾರತದ ಚರಿತ್ರೆಯನ್ನು ಗಮನಿಸಿದಾಗ, ದಾಸ್ಯದಲ್ಲಿದ್ದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಲು ಗಣೇಶೋತ್ಸವ ಮುಖ್ಯಪಾತ್ರವನ್ನು ವಹಿಸಿದೆ. ಇಂದು ಅದೇ ರೀತಿ ಸಮಾಜದ ಕೋಮು ಸೌಹಾರ್ಧವನ್ನು ಕಾಪಾಡಿಕೊಂಡು ಒಗ್ಗಟ್ಟಿನ ಜೀವನವನ್ನು ನಡೆಸುವಂತಾಗಬೇಕೆಂದರು.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಗುರಿ ಎಂಬುದು ಮುಖ್ಯ. ಹಾಗಾಗಿ ಆತನ ಜೀವಿತದಲ್ಲಿ ಗುರಿಯನ್ನು ಅರಿತು ಆ ಮೂಲಕ ಶಿಕ್ಷಣವನ್ನು ಪಡೆದರೆ ಯಶಸ್ಸುಗಳಿಸಲು ಸಾಧ್ಯ ಎಂದರು. ಮಾತ್ರವಲ್ಲದೆ ಶಿಕ್ಷಣ ಮತ್ತು ಕಲಿಕೆಗೂ ವ್ಯತ್ಯಾಸವಿದೆ. ಅದನ್ನು ಅರಿತುಕೊಳ್ಳುವುದು ಮುಖ್ಯ. ಶಿಕ್ಷಣದ ಅಂತಿಮ ಫಲ ದೇಶಕ್ಕೆ ಅರ್ಪಣೆಯಾಗಬೇಕು. ಆಗ ನಾವು ಕಲಿತ ಶಿಕ್ಷಣ ಸಾರ್ಥಕವನ್ನು ಪಡೆಯುತ್ತದೆ ಎಂದರು.

ಕಲಿಕೆ ದೆಸೆಯಲ್ಲಿ ಗುರುವನ್ನು ದೇವರಾಗಿ ನೋಡುವುದು ಅಗತ್ಯ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಕಾಂತ್ರಿಗಳು ನಡೆದಿದೆ. ಆದರೆ ಗುರು ಶಿಷ್ಯರ ಸಂಬಂಧ ಎಂದಿಗೂ ಬದಲಾಗಬಾರದು. ಕಲಿಕೆ ಕೇವಲ ಪುಸ್ತಕಕ್ಕೆ ಸಿಮೀತವಾಗದೇ, ವಿಚಾರಗಳನ್ನು ತಿಳಿದುಕೊಳ್ಳಬೇಕು. ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಪೂರಕವಾಗಬೇಕು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಸಂಸ್ಕೃತಿ, ಸಂಸ್ಕಾರವನ್ನು ಮರೆಯುವಂತಿಲ್ಲ. ಅದನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು ಎಂದು ತಿಳಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ಕೃಷ್ಣ ಕುಮಾರ್ ಶೆಟ್ಟಿ ಕಡಬ ಮಾತನಾಡಿ, ದೇಶದೆಲ್ಲೆಡೆ ಗಣೇಶೋತ್ಸವ ಆಚರಣೆ ಧರ್ಮ ಜಾಗೃತಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸನಾಥನ ಸಂಸ್ಕೃತಿಯನ್ನು ಉಳಿಸುವಲ್ಲಿ ಧಾರ್ಮಿಕ ಆಚರಣೆಯ ಅಗತ್ಯತೆ ಇದೆ. ಆದರೆ ಆಚರಣೆಗಳು ಆಡಂಬರಕ್ಕೆ ಸೀಮಿತವಾಗಬಾರದು. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಆಚರಣೆಗಳು ಆಗತ್ಯ. ಈ ಜವಾಬ್ದಾರಿಯು ಯುವ ಜನತೆಯ ಮೇಲಿದೆ. ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಮಾತನಾಡಿ, ಯಾವುದೇ ಆಚರಣೆಗಳ ಹಿಂದಿನ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಮುಖ್ಯ. ಸಮಾಜದಲ್ಲಿ ಕೆಟ್ಟದ್ದನ್ನು ಸರಿಪಡಿಸಿ, ಒಳ್ಳೆಯನದತ್ತ ಮುಖ ಮಾಡುವಲ್ಲಿ ಮತ್ತು ಒಗ್ಗಟ್ಟನ್ನು ಸೃಷ್ಟಿಸುವಲ್ಲಿ ಈ ಆಚರಣೆಗಳು ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಭಾರತದ ಮಣ್ಣಿನಲ್ಲಿಯೇ ಸಂಸ್ಕೃತಿಯಿದೆ. ಇದನ್ನು ವಿಶ್ವಕ್ಕೆ ಸಾರುವ ಕೆಲಸವು ನಮ್ಮಿಂದಾಗಬೇಕು. ಸಮಾಜಮುಖಿ ಚಿಂತನೆಯತ್ತ ನಾವು ಸಾಗಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರವಿರಾಮ ಎಸ್. ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಪೀಟರ್ ವಿಲನ್ಸ್ ಪ್ರಭಾಕರ್ ಸ್ವಾಗತಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಾಪಕ ಚಂದ್ರ ಕುಮಾರ್ ವಂದಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕಿ ಉಷಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು.