Recent Posts

Saturday, May 9, 2026
ಸುದ್ದಿ

ಮೂಢನಂಬಿಕೆಗೆ ಬಲಿಯಾಗದೆ ಮೂಲನಂಬಿಕೆ ಉಳಿಸುವ ಕೆಲಸವಾಗಬೇಕು : ಶ್ರೀಮತಿ ವಿದ್ಯಾಶ್ರೀ ಎಸ್. ಉಳ್ಳಾಲ – ಕಹಳೆ ನ್ಯೂಸ್

ನಮ್ಮ ತುಳುನಾಡಿನ ಮಂದಿ ಪ್ರಕೃತಿಯ ಆರಾಧಕರು. ಪ್ರಕೃತಿಯನ್ನೇ ದೇವರೆಂದು ಪೂಜಿಸಿ ಬದುಕನ್ನು ಕಟ್ಟಿಕೊಂಡವರು. ಆದರೆ ಇಂತಹ ತುಳುನಾಡಿನಲ್ಲಿ ಇಂದಿನ ದಿನಗಳಲ್ಲಿ ಪ್ರಕೃತಿ ವಿಕೋಪದ ಘಟನೆಗಳು ನಡೆಯುತ್ತಿರುವುದು ನಾವು ಇಂದು ಪ್ರಕೃತಿ ವಿರುಧ್ಧ ಬದುಕಲು ಆರಂಭಿಸಿದ್ದೇವೆ ಎಂದು ಸೂಚಿಸಿದೆ.ಆದ್ದರಿಂದ ಪ್ರಕೃತಿಪ್ರಿಯ ಗಣಪನ ಗಣೇಶೋತ್ಸವ ಪ್ರಕೃತಿಯ ಸಂರಕ್ಷಣೆಗೆ ನಾಂದಿಯಾಗಬೇಕಾಗಿದೆ ಎಂದು ನಮ್ಮ ತುಳುನಾಡು ಟ್ರಸ್ಟ್ ಮಂಗಳೂರು ಇದರ ಸಂಚಾಲಕರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಮಾಜಿ ಸದಸ್ಯೆ. ತುಳು ಲಿಪಿ ಶಿಕ್ಷಕಿ ಶ್ರೀಮತಿ ವಿದ್ಯಾಶ್ರೀ ಎಸ್ . ಉಳ್ಳಾಲ ನುಡಿದರು.

ಅವರು ಮರ್ಧಾಳ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ನಡೆದ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು ಇಂದು ವಿಜ್ಞಾನಿಗಳು ಅಧ್ಯಯನ ಮೂಲಕ ತಿಳಿಸಿದ ವಿಚಾರಗಳನ್ನು ನಾವು ಸ್ವೀಕಾರ ಮಾಡುತ್ತೇವೆ. ಆದರೇ ಅದೇ ವಿಚಾರಗಳನ್ನು ಅಧ್ಯಯನ ಮಾಡದೇ ನಮ್ಮ ಪೂರ್ವಜರು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆದರೆ ಅಂತಹ ವಿಚಾರಗಳನ್ನು ಹಿರಿಯರ ಬದುಕಿನ ಪಧ್ಧತಿ, ಆಚರಣೆ, ಸಂಸ್ಕ್ರತಿಯನ್ನು ತಿಳಿಯುವ ಆಸಕ್ತಿ ಇಲ್ಲದೇ ನಾವು ಬುದ್ಧಿವಂತರು ಎಂದು ಹೇಳಿಕೊಂಡರು ಮೂಢರೇ ನಂಬಬಲ್ಲ ಮೂಢನಂಬಿಕೆಗೆ ಬಲಿಯಾಗಿದ್ದೇವೆ. ನಾವು ಮೂಢನಂಬಿಕೆಗೆ ಬಲಿಯಾಗದೇ ನಮ್ಮ ಧರ್ಮದ ಆಚರಣೆಗಳ ಮೂಲನಂಬಿಕೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ಭಟ್ ಕಲ್ಕುರೆ ಮಾತನಾಡಿ ಇಂದು ನಮಗೆ ಎಲ್ಲವೂ ಪ್ರಕೃತಿಯಿಂದ ದೈವತ್ವವಾಗಿ ಬಂದಿದೆ ಇಲ್ಲಿ ನಾನು ಎಂಬುವುದು ಶೂನ್ಯ. ಆದ್ದರಿಂದ ನಾವು ಮನೆ ಮನೆಗಳಲ್ಲಿ ನಮ್ಮ ಮಕ್ಕಳಿಗೆ ಧಾರ್ಮಿಕತೆಯ ಅರಿವು ಮೂಡಿಸಿ ಮಕ್ಕಳನ್ನು ಸಮಾಜದ ಆಸ್ತಿಯಾಗಿಸಬೇಕೆಂದರು.

ವೇದಿಕೆಯಲ್ಲಿ ಶ್ರೀಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಅತ್ಯಡ್ಕ, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ಚಂದ್ರ ರೈ ಮೈಕಾಜೆ, ಅಧ್ಯಕ್ಷರಾದ ಹರೀಶ್ ಕೋಡಂದೂರು, ಕಾರ್ಯದರ್ಶಿ ತಿರುಮಲೇಶ್ವರ ಗೌಡ ಕೊಲ್ಯ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಹರೀಶ್ ಕೋಡಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ದೇವಿಪ್ರಸಾದ್ ವಂದಿಸಿದರು. ಉದಯಕುಮಾರ್ ರೈ ಶಿವಾಜಿನಗರ ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ ಹಿರಿಯರಾದ ಕುಶಾಲಪ್ಪ ಗೌಡ ಕೇನ್ಯ ಧ್ವಜಾರೋಹಣಗೈದರು. ಮಹಾಗಣಪತಿ ದೇವರ ಪ್ರತಿಷ್ಟೆ, ಗಣಪತಿ ಹೋಮ ಹಾಗೂ ಮರ್ಧಾಳ ಶ್ರೀಅಯ್ಯಪ್ಪ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆದು ಚಿಗುರು ಡ್ಯಾನ್ಸ್ ಅಕಾಡೆಮಿ ಸುಳ್ಯ ಇವರಿಂದ ನೃತ್ಯೋತ್ಸವ ನಡೆಯಿತು. ಮಧ್ಯಾಹ್ನ ಮಹಾಪೂಜೆ,ಅನ್ನಸಂರ್ತಪಣಿ,ಓಕುಲಿ ಏಲಂ ನಡೆದು ಸಂಜೆ ಮರ್ಧಾಳದಿಂದ ಬಜಕರೆ ತನಕ ಶೋಭಾಯಾತ್ರೆ ನಡೆದು ಬಜಕೆರೆ ನದಿಯಲ್ಲಿ ವಿಸರ್ಜನೆ ನಡೆಯಿತು.