
ಬೆಂಗಳೂರು : ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮ ನಗರಗಳ ಪಟ್ಟಿಯನ್ನು ಖಾಸಗಿ ಸಂಸ್ಥೆಯೊಂದು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಬೆಂಗಳೂರು ಪ್ರಥಮ ಸ್ಥಾನ ಪಡೆದಿದೆ.
ಗ್ಲೋಬಲ್ ಕನ್ಸಲ್ಟೆನ್ಸಿ ಸಂಸ್ಥೆ ಕ್ವಾಕ್ವೇರ್ಲಿ ಸೈಮಂಡ್ ಈ ಸಮೀಕ್ಷೆ ನಡೆಸಿದ್ದು, ಜಾಗತಿಕ ಮಟ್ಟದಲ್ಲಿ ಲಂಡನ್ ಪ್ರಥಮ ಸ್ಥಾನದಲ್ಲಿದ್ದು, ಮುಂಬೈ, ದೆಹಲಿ ಮತ್ತು ಚೆನ್ನೈ ಟಾಪ್ 120 ಯಲ್ಲಿ ಸ್ಥಾನ ಪಡೆದಿವೆ. ವಿಶ್ವವಿದ್ಯಾಲಯಗಳ ಸಂಖ್ಯೆ, ಅವುಗಳ ಸಾಧನೆ, ಉದ್ಯೋಗಾವಕಾಶ, ನಗರದ ಜೀವನ ಶೈಲಿ, ಅಲ್ಲಿ ದೊರೆಯುವ ಅನುಕೂಲಗಳನ್ನು ಆಧರಿಸಿ ಪಟ್ಟಿ ತಯಾರಿಸಲಾಗಿದೆ.
ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಬೆಂಗಳೂರು ನಗರ ವಿದ್ಯಾರ್ಥಿಗಳಿಗೆ ಅತ್ಯುತ್ತಮ ನಗರವಾಗಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿಗೆ 81 ಸ್ಥಾನ ಲಭಿಸಿದೆ. ಮುಂಬೈಗೆ 85, ದೆಹಲಿ 113, ಚೆನ್ನೈ 115 ನೇ ಸ್ಥಾನದಲ್ಲಿವೆ.








