
ಪುತ್ತೂರು: ಇನ್ಹರ್ ವೀಲ್ ಕ್ಲಬ್ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಅಶ್ವಿನಿ ಕೃಷ್ಣ ಮುಳಿಯ ಇವರ ಹಿರಣ್ಣಯ್ಯ ಮನೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಟಿ ತಿಂಗಳ ವಿಶೇಷ ಖಾದ್ಯಗಳ ಅಡುಗೆ ಸ್ಪರ್ದೆ ನಡೆಯಿತು. ಪತ್ರೊಡೆ, ಚೇವು, ಹಲಸಿನ ಪಾಯಸ ಮುಂತಾದ ಖಾದ್ಯಗಳು ಈ ಕಾರ್ಯಕ್ರಮದ ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಇನ್ಹರ್ ವೀಲ್ ಕ್ಲಬ್ ಅಧ್ಯಕ್ಷೆ ಸಹನ ಭವಿನ್ ಸೌಜನಿ, ಕಾರ್ಯದರ್ಶಿ ವಿಜಯಲಕ್ಷ್ಮಿ ಶೆಣೈ, ಉಪಾಧ್ಯಕ್ಷೆ ಸೀಮಾ ನಾಗರಾಜ್ ಹಾಗೂ ಕ್ಲಬ್‍ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
















