
ಬಂಟ್ವಾಳ: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬಂಟ್ವಾಳ ತಹಶಿಲ್ದಾರರಿಗೆ ಮನವಿಯನ್ನು ನೀಡಲಾಯಿತು.

ನ್ಯಾಯವಾದಿ ಸಂಜೀವ ಪುನಾಳೆಕರ ಮೇಲೆ ದಾಖಲಾದ ಆರೋಪವನ್ನು ಕೂಡಲೇ ತೆಗೆಯಬೇಕು. ನಾಗಾ ಸಾಧುಗಳಿಗೆ ಸಂಬಂಧಪಟ್ಟ ವಿಕೃತ ದೃಶ್ಯವನ್ನು ತೋರಿಸಲಾಗುವ `ಲಾಲ್ ಕಪ್ತಾನ್’ ಚಲನಚಿತ್ರವನ್ನು ನಿಷೇಧಿಸಬೇಕು. ಗೋರಕ್ಷಕರ ಮೇಲೆ ಹಲ್ಲೆಯನ್ನು ಮಾಡುವ ಮತಾಂಧರ ಮೇಲೆ ಕಠಿಣಕ್ರಮವನ್ನು ಕೈಗೊಳ್ಳಬೇಕು.
ದೇಶದಾದ್ಯಂತ ಅಕ್ರಮ ಕಸಾಯಿಖಾನೆಯನ್ನು ಕೂಡಲೇ ನಿಲ್ಲಿಸಲು ಸರಕಾರವು ಕಠಿಣ ಹೆಜ್ಜೆಯನ್ನು ಇಡಬೇಕು ಹಾಗೂ ದೇಶದಾದ್ಯಂತ ಗೋಹತ್ಯಾ ನಿಷೇಧದ ಕಾನೂನನ್ನು ತಂದು ಅದನ್ನು ತೀವ್ರವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ರು. ಈ ವೇಳೆ ಸಮಿತಿಯ ಗೋಪಾಲಕೃಷ್ಣ ಮಲ್ಯ, ರೋಹಿಣಿ, ಸುಧಾರವರು ಉಪಸ್ಥಿತರಿದ್ದರು.









