Recent Posts

Saturday, May 9, 2026
ಸುದ್ದಿ

ಬೊಳುವಾರು ಮತ್ತು ಕೊಂಬೆಟ್ಟು ಪ್ರದೇಶಗಳಿಗೆ ಭೇಟಿ ನೀಡಿದ ಪೌರಾಯುಕ್ತೆ ರೂಪ.ಟಿ ಶೆಟ್ಟಿ – ಕಹಳೆ ನ್ಯೂಸ್

ಪುತ್ತೂರು: ನಗರಾದ್ಯಂತ ದಿನೇ ದಿನೇ ಡೆಂಗ್ಯೂ ಸೇರಿದಂತೆ ಸಾಂಕ್ರಮಿಕ ರೋಗಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ನಗರದ ಸುತ್ತಮುತ್ತ ಸ್ವಚ್ಚತೆ ಕಾಪಾಡುವಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಎಚ್ಚರಿಕೆ ನೀಡುತ್ತಲೇ ಇದೆ. ಇಂದು ಪೌರಾಯುಕ್ತೆ ರೂಪ.ಟಿ ಶೆಟ್ಟಿ ಪರವಾನಿಗೆ ಇಲ್ಲದ ಅಂಗಡಿ ಮುಂಗಟ್ಟುಗಳು ತಲೆ ಎತ್ತಿರುವ ಜಾಗಗಳಿಗೆ ಹಾಗೂ ಸ್ವಚ್ಚತೆ ಕಾಪಾಡದ ಅಂಗಡಿಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದಾರೆ. ಇವರೊಂದಿಗೆ ನಗರಸಭಾ ಸದಸ್ಯರಾದ ಜಗನ್ನಿವಾಸ್ ರಾವ್ ಅವರು ಕೂಡ ಬೊಳುವಾರು ಮತ್ತು ಕೊಂಬೆಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು