Recent Posts

Saturday, May 9, 2026
ಸುದ್ದಿ

ಪ್ರಗತಿ ಸ್ಟಡಿ ಸೆಂಟರಿನ ಎರಡು ವಿಭಾಗಗಳಿಗೆ ಉಪಪ್ರಾಂಶುಪಾಲರುಗಳ ನೇಮಕ – ಕಹಳೆ ನ್ಯೂಸ್

ಪುತ್ತೂರು: ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ.)ಪುತ್ತೂರು ಇದರ ಸ್ಥಾಪಕಾಧ್ಯಕ್ಷ ಪಿ.ವಿ ಗೋಕುಲ್‍ನಾಥ್‍ರವರು ಪ್ರಗತಿ ಸ್ಟಡಿ ಸೆಂಟರ್ ಹಾಗೂ ಪ್ರಗತಿ ರೆಸಿಡೆನ್ಶಿಯಲ್ ಸ್ಟಡಿ ಸೆಂಟರ್ ಪೋಳ್ಯ, ಕಬಕ ಈ ಎರಡು ಸಂಸ್ಥೆಗಳಿಗೆ ಉಪಪ್ರಾಂಶುಪಾಲರುಗಳನ್ನು ನೇಮಕಗೊಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನಲ್ಲಿ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಕಳೆದ 12ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರೇಣುಕಾ ಸಂದೀಪ್  English, MA Sociology ಉಪಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

ಪ್ರಗತಿ ರೆಸಿಡೆನ್ಶಿಯಲ್ ಸ್ಟಡಿ ಸೆಂಟರ್ ಪೋಳ್ಯ, ಕಬಕ ಕಳೆದ 10ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗೀತಾ ಕೊಂಕೋಡಿ MA Kannada ಉಪಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿರುವ ಪ್ರಗತಿ ಸ್ಟಡಿ ಸೆಂಟರ್ ನ ಪ್ರಾಂಶುಪಾಲರಾಗಿ ಕೆ. ಹೇಮಲತಾ ಗೋಕುಲ್ ಮತ್ತು ಪ್ರಗತಿ ರೆಸಿಡೆನ್ಶಿಯಲ್ ಸ್ಟಡಿ ಸೆಂಟರ್ ಪೋಳ್ಯ, ಕಬಕ ಇದರ ಪ್ರಾಂಶುಪಾಲರಾಗಿ ಜಯಶ್ರೀ ಭಟ್‍ರವರು ಮುಂದುವರೆದಿದ್ದು, ಆಯ್ಕೆಗೊಂಡ ಉಪಪ್ರಾಂಶುಪಾಲರುಗಳಿಗೆ ಶುಭಹಾರೈಸಿದ್ದಾರೆ.