Thursday, May 14, 2026
ಸುದ್ದಿ

ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ಮೇಲೆ ನಿಗಾ; ಸೆಲೆಬ್ರಿಟಿಗಳಿಗೆ ಕಂಟಕ – ಕಹಳೆ ನ್ಯೂಸ್

ನವದೆಹಲಿ: ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವಂತಹ ಜಾಹೀರಾತುಗಳನ್ನು ಸಿದ್ಧಪಡಿಸುವ ಉತ್ಪಾದಕರು, ಸೇವಾ ಪೂರೈಕೆದಾರರು ಮತ್ತು ಅಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಇನ್ನು ಮುಂದೆ ಎಚ್ಚರವಹಿಸುವುದು ಅಗತ್ಯ. ಒಂದು ವೇಳೆ ಉತ್ಪನ್ನದ ಕುರಿತು ತಪ್ಪು ಮಾಹಿತಿ ನೀಡುವ ಜಾಹೀರಾತು ನೀಡಿದರೆ ದಂಡ ಮತ್ತು ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.

ತಪ್ಪು ಮಾಹಿತಿ ಕೊಡುವ ಜಾಹೀರಾತು ಮತ್ತು ಉತ್ಪನ್ನಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಮಂಗಳವಾರ ಲೋಕಸಭೆಯಲ್ಲಿ ಮಸೂದೆಯೊಂದನ್ನು ಅಂಗೀಕರಿಸಲಾಗಿದೆ. ಇದರಂತೆ ಕಂಡ ಕಂಡ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸಿನಿಮಾ ತಾರೆಯರು, ಕ್ರಿಕೆಟಿಗರು ಮತ್ತು ಇತರೆ ಸೆಲೆಬ್ರಿಟಿಗಳು ಕೂಡ ಸುಳ್ಳು ಮಾಹಿತಿ ಕೊಡುವ ಉತ್ಪನ್ನದ ಕುರಿತು ಪ್ರಚಾರ ಮಾಡಿದರೆ ದಂಡ ತೆರಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು