Thursday, May 14, 2026
ಸುದ್ದಿ

ಉಗ್ರ ಒಸಾಮಾ ಬಿನ್ ಲಾಡೆನ್ ಪುತ್ರ, ಅಲ್​ಖೈದಾ ಸಂಘಟನೆ ನಾಯಕ ಹಮ್ಜಾ ಬಿನ್ ಲಾಡೆನ್​ ಹತ್ಯೆ – ಕಹಳೆ ನ್ಯೂಸ್

ವಾಷಿಂಗ್ಟನ್: ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರ ಅಲ್ ಕೈದಾ ಸಂಘಟನೆಯ ಹೊಣೆಹೊತ್ತುಕೊಂಡಿದ್ದ ಪುತ್ರ ಹಂಝಾ ಕೂಡಾ ಸಾವನ್ನಪ್ಪಿರುವುದಾಗಿ ಅಮೆರಿಕದ ಮಾಧ್ಯಮಗಳ ವರದಿ ತಿಳಿಸಿದೆ.

ಎನ್ ಬಿಸಿ ವರದಿ ಪ್ರಕಾರ, ಅಮೆರಿಕದ ಮೂವರು ಅಧಿಕಾರಿಗಳು ಲಾಡೆನ್ ಪುತ್ರ ಹಂಝಾ ಸಾವನ್ನಪ್ಪಿರುವುದನ್ನು ಖಚಿತಪಡಿಸಿರುವುದಾಗಿ ಹೇಳಿದ್ದು, ಆದರೆ ಯಾವ ಸ್ಥಳ ಮತ್ತು ಯಾವಾಗ ಎಂಬ ವಿವರ ನೀಡಲು ನಿರಾಕರಿಸಿರುವುದಾಗಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಎರಡು ವರ್ಷಗಳ ಅಮೆರಿಕದ ಕಾರ್ಯಾಚರಣೆಯಲ್ಲಿ ಹಂಝಾ ಸಾವನ್ನಪ್ಪಿರುವುದಾಗಿ ಅಮೆರಿಕದ ಅಧಿಕಾರಿಗಳು ಖಚಿತಪಡಿಸಿರುವುದಾಗಿ ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಒಸಾಮಾ ಬಿನ್ ಲಾಡೆನ್ ನ ಪುತ್ರನ ಸಾವಿನ ಕುರಿತು ಎನ್ ಬಿಸಿ ವರದಿಯನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಖಚಿತಪಡಿಸಲೂ ಇಲ್ಲ, ನಿರಾಕರಿಸಲೂ ಇಲ್ಲ. ನಾನು ಈ ಬಗ್ಗೆ ಯಾವುದೇ ಹೇಳಿಕೆ ನೀಡಬೇಕಾಗಿಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.