
ಬೆಂಗಳೂರು : ಸಾಮಾಜಿಕ ನ್ಯಾಯದ ಹರಿಕಾರ, ಶತಮಾನದ ಶಾಂತಿ ದೂತ, ದುರ್ಬಲ ವರ್ಗದವರಿಗೆ ಬದುಕು ಕಲ್ಪಿಸಿಕೊಟ್ಟ, ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮವೊಂದನ್ನು ಸ್ಥಾಪಿಸಿ, ಮುಂದಿನ ಬಜೆಟ್‍ನಲ್ಲಿ 100 ಕೋಟಿ ರೂಪಾಯಿ ಅನುದಾನವನ್ನು ತೆಗೆದಿರಿಸಿ ಹಿಂದುಳಿದ ವರ್ಗದವರಿಗೆ ಆರ್ಥಿಕ ಸಹಾಯ ಒದಗಿಸಬೇಕೆಂದು, ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ, ಹರತಾಳು ಹಾಲಪ್ಪ, ಸುನೀಲ್ ಕುಮಾರ್ ಕಾರ್ಕಳ, ಉಮಾನಾಥ ಕೊಟ್ಯಾನ್ ಮೂಡುಬಿದಿರೆ, ಸುನೀಲ್ ನಾಯ್ಕ್ ಭಟ್ಕಳ, ಕುಮಾರ್ ಬಂಗಾರಪ್ಪ ಸೊರಬ, ಸುಭಾಷ್ ಗುತ್ತೇದಾರ್ ಅಳಂದ, ಮುಂತಾದವರು ಮನವಿ ನೀಡಿದರು.
ಮನವಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ.









