Thursday, May 14, 2026
ಸುದ್ದಿ

ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಸರಕಾರದ ಕಡೆಯಿಂದ ಸಂತಸದ ಸುದ್ದಿ – ಕಹಳೆ ನ್ಯೂಸ್

ಜುಲೈ ಅಂತ್ಯದ ವೇಳೆಗೆ ವೇತನದಲ್ಲಿ ಭಾರೀ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಹಿಂದೆಯೇ ಜುಲೈ 1, 2019 ರಿಂದ ಕೇಂದ್ರ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂಬ ಸುಳಿವು ಕೇಂದ್ರ ಸರ್ಕಾರದ ಕಡೆಯಿಂದ ಇತ್ತು.
ಈ ಪ್ರಕಾರವಾಗಿ ಶೇಕಡಾ 4 ರಿಂದ 5 ರವರೆಗೆ ತುಟ್ಟಿ ಭತ್ಯೆ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ. ಶೇ.4 ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾದರೆ ಈಗಿರುವ ಕೇಂದ್ರ ಸರ್ಕಾರಿ ನೌಕರರ ವೇತನ ತಿಂಗಳಿಗೆ 720 ರಿಂದ 10,000 ರೂ ವರೆಗೆ ಹೆಚ್ಚಲಿದೆ.

ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ. 12 ರಷ್ಟಿದೆ. ಈಗ ಶೇ.4 ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿದರೆ ಶೇ. 16ಕ್ಕೆ ಏರಲಿದೆ. ಈ ಪ್ರಕಾರವಾಗಿ ಕೆಳ ದರ್ಜೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ 720 ರೂ. ಮತ್ತು ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಂಗಳಿಗೆ 10000, ರೂ.ಗಳವರೆಗೆ ಹೆಚ್ಚಳವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜೂನ್‍ವರೆಗಿನ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಅಥವಾ ಎಐಸಿಪಿಐ ವರದಿ ಇನ್ನೂ ಕೂಡ ಬಂದಿಲ್ಲ. ವರದಿ ಬಿಡುಗಡೆಯಾದ ಬಳಿಕ ತುಟ್ಟಿ ಭತ್ಯೆ ಹೆಚ್ಚಳದ ಕುರಿತ ಅಂಕಿ ಅಂಶಗಳನ್ನು ಜುಲೈ ತಿಂಗಳ ಕೊನೆಗೆ 7ನೇ ವೇತನ ಆಯೋಗದ ಆಧಾರದ ಮೇಲೆ ಸಂಬಳ ಪಡೆಯುವ ನೌಕರರಿಗೆ ನೀಡಲು ತೀರ್ಮಾನಿಸಲಾಗಿದೆ.

2016 ರಲ್ಲಿ 7ನೇ ವೇತನ ಆಯೋಗ ಜಾರಿಗೆ ಬಂದ ಬಳಿಕ ಇದು ಅತಿ ದೊಡ್ಡ ತುಟ್ಟಿ ಭತ್ಯೆ ಹೆಚ್ಚಳವಾಗಿದೆ. ತುಟ್ಟಿ ಭತ್ಯೆ(ಡಿಎ) ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕಕ್ಕೆ (ಎಐಸಿಪಿಐ) ಲಿಂಕ್ ಮಾಡಲಾಗಿದೆ. ಹೀಗಾಗಿ ತುಟ್ಟಿ ಭತ್ಯೆ ಲೆಕ್ಕಚಾರಕ್ಕಾಗಿ ಎಐಸಿಪಿಐ ಸರಾಸರಿಯನ್ನು ಅಳೆಯಬೇಕಾಗುತ್ತದೆ.

ತುಟ್ಟಿ ಭತ್ಯೆ ಅಂದರೆ ಸರ್ಕಾರಿ ನೌಕರರ ಮೂಲ ಸಂಬಳದ ಒಂದು ಭಾಗವಾಗಿದ್ದು, ಇದು ನೌಕರರ ಜೀವನ ವೆಚ್ಚಕ್ಕೆ ನೇರವಾದ ಸಂಬಂಧ ಹೊಂದಿದೆ. ಸರ್ಕಾರ ಅದನ್ನು ಕಾಲಕಾಲಕ್ಕೆ ಪರಿಷ್ಕರಣೆ ಮಾಡುತ್ತದೆ. ಮತ್ತು ಮೂಲ ವೇತನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಸದ್ಯ ನೌಕರರು ಮತ್ತು ಪಿಂಚಣಿದಾರರು ಶೇ.12ರಷ್ಟು ತುಟ್ಟಿ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ.