
ಕಲ್ಲಡ್ಕ: ಶ್ರೀರಾಮ ಶಿಶುಮಂದಿರದಲ್ಲಿ ಶೈಕ್ಷಣಿಕ ವರ್ಷದ ಮೊದಲನೇ ಪಾಲಕರ ಸಭೆ ನಡೆಯಿತು. ಕಾರ್ಯಕ್ರಮವನ್ನು ಪ್ರಾರ್ಥನೆ ಮೂಲಕ ಪ್ರಾರಂಭ ಮಾಡಲಾಯಿತು. ಮನೆಯಲ್ಲಿ ಭಜನೆ ಹೇಳುವುದು, ಶ್ಲೋಕಗಳನ್ನು ಹೇಳುವುದು, ದೇವರ ಪೂಜೆ ಮಾಡುವುದು, ತನ್ನ ಕೆಲಸಗಳನ್ನು ತಾನೇ ಮಾಡುವುದು, ಊಟ ಮಾಡುವಾಗ ಒಟ್ಟಿಗೆ ಕೂತು ಪ್ರಾರ್ಥನೆ ಹೇಳಿ ಊಟ ಮಾಡುವುದು. ಅಮ್ಮನ ಕೆಲಸದಲ್ಲಿ ಸಹಾಯ ಮಾಡುವುದು, ಮನೆಯಲ್ಲಿ ಹಿರಿಯರಿಗೆ ನಮಸ್ಕರಿಸುವುದು, ಶ್ಲೋಕಗಳನ್ನು ಮನೆಯವರಿಗೆ ಹೇಳಿಕೊಡುವುದು, ಮನೆಯಲ್ಲಿ ನಿಧಾನವಾಗಿ ಶಾಂತವಾಗಿ ಮಾತನಾಡಲು ಹೇಳುವುದು, ಈ ರೀತಿಯಾಗಿ ಪಾಲಕರು ತಮ್ಮ ಮಕ್ಕಳಲ್ಲಿ ಆದ ಬದಲಾವಣೆಗಳನ್ನು ಹಂಚಿಕೊಂಡರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|| ಪ್ರಭಾಕರ ಭಟ್ ಪಾಲಕರಿಗೆ ಮಾರ್ಗದರ್ಶನ ಮಾಡಿದರು. ವೇದಿಕೆಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 93 ಪಾಲಕರು 9 ದಂಪತಿಗಳು ಹಾಗೆಯೇ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪೂಜಾ ಸ್ವಾಗತಿಸಿ, ತ್ರಿವೇಣಿ ವಂದಿಸಿ, ಚೈತ್ರ ನಿರೂಪಿಸಿದರು.









