Wednesday, May 6, 2026
ಸುದ್ದಿ

ಯುವಾ ಬ್ರಿಗೇಡ್ ಸುಳ್ಯ ಘಟಕದ ಮನವಿಗೆ ತಕ್ಷಣ ಸ್ಪಂದಿಸಿದ ಸುಳ್ಯ ತಾಲೂಕು ತಹಶೀಲ್ದಾರ್ ಕುಂಞ ಅಹಮ್ಮದ್ – ಕಹಳೆ ನ್ಯೂಸ್

ಸುಳ್ಯ : ಮರ್ಕಂಜ ಗ್ರಾಮದ ಪದ್ಮನಾಭರವರ ಪುತ್ರಿ ಕಳೆದ 15 ವರ್ಷಗಳಿಂದ ನಡೆದಾಡಲು ಆಗದೇ ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತರಾಗಿದ್ದರು. ಈ ಕುಟುಂಬದ ಬಗ್ಗೆ ಯುವಾ ಬ್ರಿಗೇಡ್ ಸುಳ್ಯ ಘಟಕವು ಮುತುವರ್ಜಿ ವಹಿಸಿ, ಸೋಲಾರ್ ಅಳವಡಿಸಿ ಕೊಟ್ಟಿದ್ದಾರೆ.ಹಾಗೂ ಈ ಕುಟುಂಬಕ್ಕೆ ಪಡಿತರ ಚೀಟಿ ಮತ್ತು ವಿಕಲಚೇತನ ಮಗುವಿನ ಬಾಳಿಗೆ ಮಾಸಾಶನ ದೂರೆಯಲು ಅನುಕೂಲವಾಗುವಂತೆ, ಸುಳ್ಯ ತಾಲೂಕು ತಹಶೀಲ್ದಾರರಾದ ಶ್ರೀ ಕುಂಞ ಅಹಮ್ಮದ್‍ರವರಲ್ಲಿ ಮನವಿ ಮಾಡಿದ್ದರು. ಮನವಿಗೆ ತಕ್ಷಣ ಸ್ಪಂದಿಸಿದ ತಹಶೀಲ್ದಾರ್ ತಮ್ಮ ಸಿಬ್ಬಂದಿಗಳಿಗೆ, ನಿರ್ದೇಶನ ನೀಡಿದ್ದರು ಮತ್ತು ಯುವಾ ಬ್ರಿಗೇಡ್ ಸದಸ್ಯರಿಗೆ ಸೂಕ್ತ ಮಾರ್ಗದರ್ಶನವಿತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೇವಲ ಎರಡು ದಿನಗಳಲ್ಲಿ ಪದ್ಮನಾಭರವರ ಕುಟುಂಬಕ್ಕೆ ರೇಷನ್ ಕಾರ್ಡ್ ಹಾಗೂ ಇತರೆ ಸೌಲಭ್ಯಗಳನ್ನು ದೊರಕಿಸಿ ಕೊಟ್ಟಿದ್ದಾರೆ. ಸುಳ್ಯ ತಾಲೂಕು ತಹಶೀಲ್ದಾರ್ ಕುಂಞ ಅಹಮ್ಮದ್ ಅವರ ಕಾರ್ಯಕ್ಕೆ ಸಿಬ್ಬಂದಿಗಳು ಸಹಕರಿಸಿದ್ದಾರೆ.
ಮಕರ್ಂಜದ ಚೀಮಾಡ್‍ನಲ್ಲಿರುವ ಪದ್ಮನಾಭರವರ ಮನೆಗೆ, ಮಧುಕಿರಣ್ ಅನ್ನಪೂರ್ಣ ಎಲೆಕ್ಟ್ರಿಕಲ್. ವೆಂಕಟ್ರಮಣ ಗೌಡ ಪರಿವಾರಕಾನ, ರವಿಕುಮಾರ್ ಕುರುಂಜಿ, ಇವರೆಲ್ಲರ ಸಹಕಾರದೊಂದಿಗೆ, ಯುವಬ್ರಿಗೇಡ್ ತಂಡದ ಸದಸ್ಯರ ಸಹಕಾರದಿಂದ ಉಚಿತವಾಗಿ ವಿದ್ಯುತ್ ವಯರಿಂಗ್ ಮಾಡಿಕೊಡಲಾಯಿತು.

ಈ ಭಾಗದ ಜನತೆ ಈ ಸಹಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯುವಬ್ರಿಗೇಡ್ ವತಿಯಿಂದ ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳು ನಡೆಯಲಿ ಎಂದು ಹಾರೈಸಿದ್ದಾರೆ.