Wednesday, May 6, 2026
ಸುದ್ದಿ

ಒಂದೇ ಬಾರಿ ಎರಡು ಡಿಗ್ರಿ ಮಾಡಿ! – ಕಹಳೆ ನ್ಯೂಸ್

ಹೊಸದಿಲ್ಲಿ: ಒಂದು ಕೋರ್ಸ್ ಮಾಡುತ್ತಿರುವಾಗಲೇ ಇನ್ನೊಂದು ಕೋರ್ಸ್ ಮಾಡುವ ಆಸೆ ಹಲವು ವಿದ್ಯಾರ್ಥಿಗಳಲ್ಲಿ ಇರುತ್ತದೆಯಾದರೂ ಸದ್ಯದ ಶಿಕ್ಷಣ ನೀತಿಯಲ್ಲಿ ಅದು ಸಾಧ್ಯವಿಲ್ಲ. ಆದರೆ ಇಂತಹ ಆಸೆ ಹಾಗೂ ಸಮರ್ಥ್ಯವಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಶುಭ ಸುದ್ದಿ ನೀಡಿದೆ. ಒಂದೇ ಬಾರಿಗೆ ಹಲವು ಕೋರ್ಸ್‍ಗಳನ್ನು ಕೈಗೊಳ್ಳುವ ಸಾಧ್ಯತೆಯ ಬಗ್ಗೆ ಸದ್ಯ ಯುಜಿಸಿ ಅಧ್ಯಯನ ನಡೆಸುತ್ತಿದೆ.

ಯುಜಿಸಿ ಉಪಾಧ್ಯಕ್ಷ ಭೂಷಣ್ ಪಟವರ್ಧನ್ ನೇತೃತ್ವದಲ್ಲಿ ಈಗಾಗಲೇ ಸಮಿತಿಯನ್ನು ರಚಿಸಲಾಗಿದೆ. ಒಂದೇ ವಿಶ್ವವಿದ್ಯಾಲಯದಿಂದ ಅಥವಾ ಬೇರೆ ವಿಶ್ವವಿದ್ಯಾಲಯದಿಂದ ಒಂದೇ ಬಾರಿಗೆ ಎರಡು ಡಿಗ್ರಿ ಮಾಡುವ ಸಾಧ್ಯತೆ ಬಾಧ್ಯತೆಗಳ ಅಧ್ಯಯನ ನಡೆಸಲಿದೆ. ಈ ಕೋರ್ಸ್‍ಗಳನ್ನು ದೂರ ಶಿಕ್ಷಣ, ಆನ್‍ಲೈನ್ ವಿಧಾನ ಅಥವಾ ಅರೆಕಾಲಿಕ ವಿಧಾನದಲ್ಲಿ ಮಾಡಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೊಮ್ಮೆ 2012ರಲ್ಲೂ ಇದೇ ರೀತಿಯ ಯೋಜನೆ ಯುಜಿಸಿ ಮುಂದೆ ಇತ್ತು. ಸಮಿತಿ ರಚನೆ ಮಾಡಿ, ಅಧ್ಯಯನ ನಡೆಸಿದ ಅನಂತರ ಕೈಬಿಡಲಾಗಿತ್ತು. ಆದರೆ ಈಗ ಮತ್ತೊಮ್ಮೆ ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ಒಂದು ತಿಂಗಳ ಹಿಂದೆಯೇ ಸಮಿತಿ ರಚನೆಯಾಗಿದ್ದು, ಸಮಿತಿ ಈಗಾಗಲೇ ಒಮ್ಮೆ ಸಭೆಯನ್ನೂ ಸೇರಿದೆ. ಶಿಕ್ಷಣ ಕ್ಷೇತ್ರದ ವಿವಿಧ ಸ್ತರದ ಪರಿಣತರ ಸಲಹೆಯನ್ನು ಈ ಬಗ್ಗೆ ಪಡೆಯಲಾಗುತ್ತಿದೆ ಎಂದು ಯುಜಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.