Recent Posts

Wednesday, May 6, 2026
ಸುದ್ದಿ

ಸ್ವಾತಂತ್ರ್ಯೋತ್ಸವಕ್ಕೆ ಹಳೆ ಸಮವಸ್ತ್ರವೇ ಗತಿ! – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಹೊಸ ಸಮವಸ್ತ್ರ ಧರಿಸಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಬೇಕೆಂಬ ಸರಕಾರಿ ಶಾಲಾ ವಿದ್ಯಾರ್ಥಿಗಳ ಆಸೆಗೆ ತಣ್ಣಿರು ಬಿದ್ದಿದೆ. ಸಮವಸ್ತ್ರ ಶಿಕ್ಷಣ ಇಲಾಖೆಗೇ ಬಂದಿಲ್ಲ. ಇನ್ನು ಮಕ್ಕಳಿಗೆ ಸ್ವಾತಂತ್ರ್ಯ ದಿನಕ್ಕೆ ಬಟ್ಟೆ ವಿತರಣೆಯಾಗೋದು ದೂರದ ಮಾತು ಬಿಡಿ. ಹೀಗಾಗಿ ಆ.15ಕ್ಕೆ ಮಕ್ಕಳಿಗೆ ಹಳೆ ಬಟ್ಟೆಯೇ ಗತಿ.
ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಜೂ.1ರಂದು ಆರಂಭಗೊಂಡಿವೆ. ಆದರೆ ತಿಂಗಳು 2 ಕಳೆದರೂ ಸಮವಸ್ತ್ರ ಮಕ್ಕಳ ಕೈಸೇರಿಲ್ಲ. ಸರಕಾರ ಸರಕಾರಿ ಶಾಲಾ ಮಕ್ಕಳಿಗೆ ವರ್ಷಕ್ಕೆ ಎರಡು ಜತೆ ಸಮವಸ್ತ್ರ ನೀಡುವ ನಿರ್ಧಾರವನ್ನು ಕಳೆದ ವರ್ಷ ಕೈಗೊಂಡಿತ್ತು.

ಹಿಂದಿನ ವರ್ಷಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿಗಳ ಮೂಲಕ ಬಟ್ಟೆ ಖರೀದಿಸಿ ಮಕ್ಕಳ ಅಳತೆಗೆ ಅನುಗುಣವಾಗಿ ಹೊಲಿಸಿ, ವಿತರಿಸಲಾಗುತ್ತಿತ್ತು. ಶಾಲೆಯಿಂದ ನೀಡಿದ ಅವಶ್ಯಕತೆ ಪಟ್ಟಿ ಆಧರಿಸಿ ಸರಕಾರ ಅನುದಾನವನ್ನು ಎಸ್‍ಡಿಎಂಸಿ ಖಾತೆಗೆ ಜಮೆ ಮಾಡುತ್ತಿತ್ತು. ಆದರೆ ಕೆಲವು ಸಂದರ್ಭಗಳಲ್ಲಿ ಇದು ಸಾಕಾಗದೆ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು, ಊರ ದಾನಿಗಳು ಹಣ ಭರಿಸಿ ಬಟ್ಟೆಯನ್ನು ಹೊಲಿಸಿ ಮಕ್ಕಳಿಗೆ ಕೊಟ್ಟ ಉದಾಹರಣೆಗಳು ಎಷ್ಟೋ ಶಾಲೆಗಳಲ್ಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಸಂಬಂಧ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುವ ಕುರಿತು ಕಮಿಷನರ್ ಅವರು ಮಾಹಿತಿ ನೀಡಿದ್ದಾರೆ. ಶೀಘ್ರ ವಿತರಣೆಯಾಗುವ ವಿಶ್ವಾಸವಿದೆ. ಸಮವಸ್ತ್ರ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆದ ಬಳಿಕ ವಿತರಣೆಯಾಗಲಿದೆ.