Saturday, May 9, 2026
ಸುದ್ದಿ

ವಿದ್ಯಾಶ್ರೀ ಪ್ರೆಂಡ್ಸ್ ವತಿಯಿಂದ ವನಮಹೋತ್ಸವ – ಕಹಳೆ ನ್ಯೂಸ್

ಪಾಣಾಜೆ: ವಿದ್ಯಾಶ್ರೀ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಆರ್ಲಪದವು, ಪಾಣಾಜೆ ಹಾಗೂ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಒಡ್ಯ ಇದರ ವತಿಯಿಂದ ಒಡ್ಯ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಗ್ರಾ.ಪಂ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ ಉದ್ಘಾಟನೆ ಮಾಡಿ ವನಮಹೋತ್ಸವದ ಮಹತ್ವ ಹಾಗೂ ವಿದ್ಯಾಶ್ರೀ ಪ್ರೆಂಡ್ಸ್ ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಅಭಿನಂದಿಸಿದರು. ಮುಖ್ಯ ಅತಿಥಿಯಾಗಿ ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಜಿ. ಪರಿಸರ ರಕ್ಷಣೆ ಹಾಗೂ ಪರಿಸರವನ್ನು ಉಳಿಸುವಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ಸಲಹೆ ಸೂಚನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಶ್ರೀಹರಿ ಪಾಣಾಜೆ (ಪೋಲಿಸ್ ಇಲಾಖೆ), ಪ್ರಗತಿಪರ ಕೃಷಿಕ ಶಂಕರ ರೈ ಬಾಳೆಮೂಲೆ ಒಡ್ಯ, ಕೃಷ್ಣಪ್ಪ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ, ನಾರಾಯಣ ನಾಯಕ್ ಅಪಿನಿಮೂಲೆ, ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ ಯ ಅಧ್ಯಕ್ಷ ಕೃಷ್ಣ ಭಟ್ಟ್ ಬಟ್ಯಮೂಲೆ ವಹಿಸಿದ್ದರು.

ವಿದ್ಯಾಶ್ರೀ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಚಂದ್ರ ಎ.ಬಿ. ಹಾಗೂ ವಿದ್ಯಾಶ್ರೀ ಪ್ರೆಂಡ್ಸ್ ನ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು. ಶಾಲೆಯ ಅಧ್ಯಾಪಕ ಉಸ್ಮಾನ್ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.